ಕನಕರಾಯನ ಜಾತ್ರೆ ಸಂಪನ್ನ

2SND-02
ಸಿಂಧನೂರು ತಾಲೂಕಿನ ಜಾಲಿಹಾಳದ ಶ್ರೀಕನಕರಾಯನಿಗೆ ಜಾತ್ರೆ ನಿಮಿತ್ತ ವಿಶೇಷ ಅಲಂಕಾರ ಮಾಡಿರುವುದು.
Published on

ಸಿಂಧನೂರು: ತಾಲೂಕಿನ ಜಾಲಿಹಾಳ ಗ್ರಾಮದಲ್ಲಿ ಕನಕರಾಯನ ಜಾತ್ರೆ ಸೋಮವಾರ ವಿಜೃಂಭಣೆಯಿಂದ ಜರುಗಿತು.

ಬೆಳಗ್ಗೆ ಕನಕರಾಯನಿಗೆ ಮಹಾರುದ್ರಾಭೀಷೇಕ, ಸಹಸ್ರ ಬಿಲ್ವಾರ್ಚನೆ, ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ನಂತರ ಸುಮಂಗಲೆಯರು ಕುಂಭ-ಕಳಸದೊಂದಿಗೆ ಗಂಗೆಸ್ಥಳಕ್ಕೆ ಹೋಗಿ ಬಂದರು. ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.

ಕನಕರಾಯ ಮಠದ ಪೀಠಾಧಿಪತಿ ಗುರುಬಸಯ್ಯಸ್ವಾಮಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಗ್ರಾಮದ ಪ್ರಮುಖರಾದ ಶಂಕ್ರಪ್ಪ ಸಾಹುಕಾರ, ಕೆ.ಪಂಪಾಪತಿ. ಶರಣಪ್ಪ, ವೀರೇಶ, ನಾಗರಾಜ, ಲಕ್ಷ್ಮಣ, ಸಿದ್ದಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net