ಉತ್ತಮ ಸಮಾಜಕ್ಕಾಗಿ ಅಕ್ಷರಸ್ಥರನ್ನಾಗಿಸಿ

PRAMANA
ಕನಕಗಿರಿಯ ಕೆಪಿಎಸ್(ಪ್ರೌಢ ವಿಭಾಗ)ದಲ್ಲಿ ಹಮ್ಮಿಕೊಂಡಿದ್ದ ಸಾಕ್ಷರತಾ ದಿನಾಚರಣೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಲಾಯಿತು. ಪ್ರಶಿಕ್ಷಣಾರ್ಥಿಗಳಾದ ಪೂಜಾ ಚಿತ್ರಗಾರ, ಸಮ್ರೀನ್ ಬೇಗಂ, ಅಂಜುಂ ಬೈತಲಿ, ದಿಲ್‌ಶಾದ್ ಇತರರಿದ್ದರು.
Published on

ಕನಕಗಿರಿ: ಉತ್ತಮ ಸಮಾಜ ನಿರ್ಮಿಸಲು ಶಿಕ್ಷಣ ವಂಚಿತರನ್ನು ಗುರುತಿಸಿ ಅಕ್ಷರಸ್ಥರನ್ನಾಗಿಸಬೇಕು ಎಂದು ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಭಾರ ಉಪಪ್ರಾಚಾರ್ಯ ದೊಡ್ಡಬಸನಗೌಡ ಪಾಟೀಲ್ ಹೇಳಿದರು.

ಕೆಪಿಎಸ್ ಪ್ರೌಢ ವಿಭಾಗದಲ್ಲಿ ಅಂತಾರಾಷ್ಟ್ರೀಯ ಸಾಕ್ಷರತಾ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಪ್ರಮಾಣ ವಚನ ಬೋಧನೆ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು. ಗ್ರಾಮೀಣ ಭಾಗದಲ್ಲಿ ಈ ಹಿಂದೆ ಬಡತನ, ನಾನಾ ಜವಾಬ್ದಾರಿ, ಶಿಕ್ಷಣ ಸಂಸ್ಥೆಗಳ ಕೊರತೆ ಇತರ ಕಾರಣಗಳಿಂದ ಹಲವರು ಶಿಕ್ಷಣದಿಂದ ದೂರ ಉಳಿದಿದ್ದಾರೆ. ಇಂತವರನ್ನು ಗುರುತಿಸಿ ಅಕ್ಷರಸ್ಥರನ್ನಾಗಿಸಬೇಕು. ಇದು ದೇಶದ ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದರು.

ಕಾರ್ಯಕ್ರಮ ಅಂಗವಾಗಿ ರಂಗೋಲಿ ಹಾಗೂ ಭಾಷಣ ಸ್ಪರ್ಧೆ ನಡೆಯಿತು. ಶಿಕ್ಷಕ ಕನಕಾಚಲ, ಪ್ರಮಾಣ ವಚನ ಬೋಧಿಸಿದರು. ಶಿಕ್ಷಕರಾದ ಅನಿಲ್ ಕುಮಾರ್, ಸಲ್ಮಾ ಜಹಾನ್, ಎಸ್.ಬಿ. ಪಾಟೀಲ್, ವಿಜಯೇಂದ್ರ, ಶ್ಯಾಮೀದ್‌ಸಾಬ್ ಲೈನ್ದಾರ್, ಬಿಬಿ ಉಮ್ಸಲ್ಮ, ಲಕ್ಷ್ಮೀಬಾಯಿ, ಅತಿಥಿ ಶಿಕ್ಷಕರಾದ ಆಫ್ರಿನ್, ವೆಂಕಟೇಶ ರೆಡ್ಡಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net