

ಕನಕಗಿರಿ: ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ 17ವರ್ಷದೊಳಗಿನ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ತಾಲೂಕಿನ ಸಿರವಾರದ ಡಾ.ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯ ಮೂವರು ವಿದ್ಯಾರ್ಥಿಗಳು ಯೋಗಾಸನ ಸ್ಪರ್ಧೆಯಲ್ಲಿ ವಿಜೇತರಾಗಿ ಕಲಬುರಗಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಶಾಂತಮ್ಮ, ದುರುಗಪ್ಪ ಹಾಗೂ ಅಶೋಕ ವಿಜೇತ ವಿದ್ಯಾರ್ಥಿಗಳು. ಇವರಲ್ಲಿ ದುರುಗಪ್ಪ, ಸತತ ಮೂರನೇ ಬಾರಿಗೆ ಯೋಗಾಸನದಲ್ಲಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿರುವುದು ವಿಶೇಷ. ಇವರ ವೀರಭದ್ರಾಸನ, ಭುಜಂಗಾಸನ, ಸೂರ್ಯ ನಮಸ್ಕಾರ, ಪ್ರಾಣಾಯಾಮ ಇತರ ಯೋಗಾಸನ ಭಂಗಿಗಳು ಗಮನ ಸೆಳೆದಿವೆ ಎಂದು ತರಬೇತುದಾರ ಡಾ. ಪರಶುರಾಮ ಎ.ಕೆ. ತಿಳಿಸಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಶಾಲೆಯ ಪ್ರಾಚಾರ್ಯ ಶೇಖಪ್ಪ ದು. ಅರಷಣಗಿ, ಶಿಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.