ಸ್ತ್ರೀ ಸಬಲೀಕರಣದ ಜಾಗೃತಿ ಅಗತ್ಯ - ಸಾಹಿತಿ ಅರುಣಾ ನರೇಂದ್ರ ಅಭಿಮತ

knk2
ಕನಕಗಿರಿಯ ಶ್ರೀ ಪಂಪಣ್ಣ ಶರಣಪ್ಪ ಗುಗ್ಗಳಶೆಟ್ರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಕ್ರಮವನ್ನು ಸಾಹಿತಿ ಅರುಣಾ ನರೇಂದ್ರ ಉದ್ಘಾಟಿಸಿದರು. ಪ್ರಾಧ್ಯಾಪಕರಾದ ಮಾರ್ವಿನ್ ಡಿಸೋಜ, ಲಲಿತಾ ಕಿನ್ನಾಳ, ಸರ್ವಮಂಗಳಮ್ಮ ಟಿ.ಆರ್. ರಕ್ಷಿತ್ ಎನ್. ಉಪನ್ಯಾಸಕರಾದ ಗೋಪಾಲ ರೆಡ್ಡಿ, ಸೋಮಶೇಖರ್ ಇತರರಿದ್ದರು.
Published on

ಕನಕಗಿರಿ: ಮಹಿಳೆಯು ತಾಯಿಯಾಗಿ, ಸಹೋದರಿಯಾಗಿ, ಪತ್ನಿಯಾಗಿ ಒಬ್ಬ ವ್ಯಕ್ತಿಯ ಬಾಳಿಗೆ ಬೆಳಕಾಗುತ್ತಾಳೆ. ಮನೆಯ ಜವಾಬ್ದಾರಿ ಜತೆಗೆ ಶಿಕ್ಷಕಿಯಾಗಿ, ಇಂಜಿನಿಯರ್ ಆಗಿ, ಪೈಲೆಟ್ ಆಗಿಯೂ ತನ್ನ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾಳೆ ಎಂದು ಸಾಹಿತಿ ಅರುಣಾ ನರೇಂದ್ರ ಹೇಳಿದರು.

ಇಲ್ಲಿನ ಶ್ರೀ ಪಂಪಣ್ಣ ಶರಣಪ್ಪ ಗುಗ್ಗಳಶೆಟ್ರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಹಿಳಾ ಸಬಲೀಕರಣ ಘಟಕದಿಂದ ಶುಕ್ರವಾರ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಮಾಜದ ಕಟ್ಟುಪಾಡುಗಳ ಹೊರತಾಗಿಯೂ ಇಂದಿನ ದಿನಗಳಲ್ಲಿ ಮಹಿಳೆ ಸಾಧಿಸುತ್ತಿದ್ದಾಳೆ. ಆದರೂ ಸಾಮಾಜಿಕವಾಗಿ ಆರ್ಥಿಕವಾಗಿ, ರಾಜಕೀಯವಾಗಿ, ತನ್ನದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಹಿಂಜರಿಕೆಯಂಥ ಸಂದರ್ಭಗಳನ್ನು ಎದುರಿಸುತ್ತಿದ್ದಾಳೆ. ಈ ಎಲ್ಲವುಗಳನ್ನೂ ಮೀರಿ ಆಕೆಯ ಹಕ್ಕು, ಜವಾಬ್ದಾರಿಗಳು, ಸಮಾನತೆ ಹಾಗೂ ಸಬಲೀಕರಣದ ಜಾಗೃತಿಯ ಅವಶ್ಯಕತೆ ಇದೆ ಎಂದರು.

ಅರ್ಚನಾ ಹಿರೇಮಠ ಉಪನ್ಯಾಸ ನೀಡಿ, ಮಹಿಳೆ ಭಾವಾನಾತ್ಮಕ ಜೀವಿ. ಆದರೆ, ಸಮಾಜದಲ್ಲಿ ಅವಳ ಪಾತ್ರ ಮಾತ್ರ ಗೌಣ. ಹೆಣ್ಣಿಗೆ ಹೆಣ್ಣು ಶತ್ರು ಅಂತ ಹೇಳುವುದು ಸೂಕ್ತವಲ್ಲ. ಮಹಿಳೆಯು ಸ್ವಾವಲಂಬಿಯಾಗಲು ಬಯಸುತ್ತಾಳೆ. ಅವಳ ಆಸೆ-ಆಕಾಂಕ್ಷೆಗಳಿಗೆ ಪೂರಕ ವಾತಾವರಣ ನಿರ್ಮಾಣಗೊಂಡಾಗ ಮಾತ್ರ ಸಮ ಸಮಾಜದ ಕನಸು ನನಸಾಗುತ್ತದೆ ಎಂದು ತಿಳಿಸಿದರು.

ಪ್ರಭಾರ ಪ್ರಾಚಾರ್ಯ ಪ್ರೊ.ಬಜರಂಗ ಬಲಿ, ಪ್ರಾಧ್ಯಾಪಕರಾದ ಮಾರ್ವಿನ್ ಡಿಸೋಜ, ಲಲಿತಾ ಕಿನ್ನಾಳ, ಸರ್ವಮಂಗಳಮ್ಮ ಟಿ.ಆರ್., ರಕ್ಷಿತ್ ಎನ್, ಉಪನ್ಯಾಸಕರಾದ ಗೋಪಾಲರೆಡ್ಡಿ, ಸೋಮಶೇಖರ್, ಮಾರುತೇಶ, ರವಿಕುಮಾರ, ದೇವೇಂದ್ರಪ್ಪ, ಮಂಜುನಾಥ, ಎಸ್.ಕೆ. ಖಾದ್ರಿ, ವೀರೇಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net