

ಕನಕಗಿರಿ: ಎಪ್ಪತ್ತನೆ ವನ್ಯಜೀವಿ ಸಪ್ತಾಹ ನಿಮಿತ್ತ ಅರಣ್ಯ ಇಲಾಖೆಯಿಂದ ಶುಕ್ರವಾರ ಪ್ರಾಣಿ ಸಂಕುಲದ ಸಾಕ್ಷೃಚಿತ್ರ ಮೂಲಕ ಅರಿವು ಮೂಡಿಸಲಾಯಿತು.
ಪಪಂ, ಕರ್ನಾಟಕ ಪಬ್ಲಿಕ್ ಶಾಲೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅರಣ್ಯ ಇಲಾಖೆ ವಾಹನದಲ್ಲಿ ಎಲ್‌ಇಡಿ ಪರದೆಯ ಮೂಲಕ ಪ್ರಾಣಿ, ಸರಿಸೃಪಗಳ ಮಹತ್ವ ತಿಳಿಸುವ ಹಾಗೂ ಆಹಾರ ಸರಪಳಿ, ಸಮೀಪದ ದರೋಜಿ ಕರಡಿ ಧಾಮ, ಬಂಕಾಪುರ ತೋಳ ಧಾಮ ಕುರಿತು ಸಾಕ್ಷೃಚಿತ್ರ ಮೂಲಕ ವಿದ್ಯಾರ್ಥಿಗಳಿಗೆ ತಿಳಿಲಾಯಿತು.
ನಂತರ ಡಿಎಫ್‌ಒ ಅವರು ಅರಣ್ಯ ಹಾಗೂ ಪ್ರಾಣಿಗಳ ಕುರಿತು ಮಾತನಾಡಿದ ವಿಡಿಯೋ ವೀಕ್ಷಿಸಿದರು. ಅರಣ್ಯ ಇಲಾಖೆ ಸಿಬ್ಬಂದಿ ಈರಪ್ಪ ಹಾದಿಮನಿ, ಶಿಕ್ಷಕ ಶ್ಯಾಮೀದ್ ಸಾಬ್ ಲೈನ್ದಾರ್ ಇತರರಿದ್ದರು.