ಕನಕಗಿರಿ ಕ್ಷೇತ್ರದ ಮೂಲಕ ವಿಧಾನಸೌಧಕ್ಕೆ ಶ್ರೀರಂಗದೇವರಾಯಲು ಎಂಟ್ರಿ

Raja Srirangadevarayalu Oath
ವೀರಪ್ಪ ಮೊಯ್ಲಿ ಸಂಪುಟದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ರಾಜಾ ಶ್ರೀರಂಗದೇವರಾಯಲು.
Published on

ಕನಕಗಿರಿ: ಕನಕಗಿರಿ ಕ್ಷೇತ್ರವಾದ ಬಳಿಕ ನಡೆದ ಎರಡನೇ ಚುನಾವಣೆಯಲ್ಲಿ ಶ್ರೀರಂಗದೇವರಾಯಲು ಸ್ಪರ್ಧಿಸಿ, ಮೊದಲ ಬಾರಿಗೆ ಶಾಸಕರಾಗಿ ವಿಧಾನಸೌಧದ ಮೆಟ್ಟಿಲೇರಿದ್ದರು. 1978ರಲ್ಲಿ ಕನಕಗಿರಿ ವಿಧಾನಸಭಾ ಕ್ಷೇತ್ರವಾದ ಬಳಿಕ ಮೊದಲ ಶಾಸಕರಾಗಿ ಎಂ.ನಾಗಪ್ಪ ಆಯ್ಕೆಯಾಗಿದ್ದರು.

1983 ಮತ್ತು 1985ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಶ್ರೀರಂಗದೇವರಾಯಲು ಎರಡು ಚುನಾವಣೆಗಳಲ್ಲಿ ಸ್ಥಳೀಯರಾದ ದುರ್ಗಾದಾಸ್ ಯಾದವ್, ಮಾಜಿ ಸಚಿವ ನಾಗಪ್ಪರನ್ನು ಸೋಲಿಸಿ ಸತತ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.

1974-78ರ ಚುನಾವಣೆಯಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿ ಗಂಗಾವತಿ ಕ್ಷೇತ್ರದಲ್ಲಿ ಸೋಲುಂಡಿದ್ದ ಅವರು, ಎಚ್.ಜಿ ರಾಮುಲು ಸಹಕಾರದಿಂದ ಕನಕಗಿರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ 1983ರಲ್ಲಿ ಸ್ಪರ್ಧಿಸಿ ಶಾಸಕರಾಗಿದ್ದರು. ಅದಾದ ಬಳಿಕ ನಡೆದ ಬೈಎಲೆಕ್ಷನ್‌ನಲ್ಲೂ ಗೆಲುವು ಸಾಧಿಸಿದರು.

ಜನ ಸಾಮಾನ್ಯರಿಗೆ ಹತ್ತಿರವಾಗಿದ್ದ ಶ್ರೀರಂಗದೇವರಾಯಲು ಜನಮನ್ನಣೆ ಗಳಿಸಿದ್ದರು ಎಂದು ಮೊದಲ ಚುನಾವಣೆಯಲ್ಲಿ ಅವರ ವಿರುದ್ದ ಪರಾಭವಗೊಂಡಿದ್ದ ದುರ್ಗಾದಾಸ್ ಯಾದವ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net