ವಿಠ್ಠಲಾಪುರ ಕೆರೆ ಬಳಿ ವಾಹನ ಪಲ್ಟಿ

OMNI VAN
ಕೆಸರು ಗದ್ದೆಯಲ್ಲಿ ಪಲ್ಟಿಯಾದ ಓಮಿನಿ ವಾಹನ.
Published on

ಕನಕಗಿರಿ: ಪರೀಕ್ಷೆ ಬರೆಯಲು 27 ವಿದ್ಯಾರ್ಥಿಗಳು ಓಮಿನಿ ವಾಹನದಲ್ಲಿ ತೆರಳುತ್ತಿದ್ದ ವೇಳೆ ವಿಠ್ಠಲಾಪುರ ಕೆರೆ ಬಳಿಯ ಕೆಸರು ಗದ್ದೆಯಲ್ಲಿ ಪಲ್ಟಿಹೊಡೆದಿದ್ದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಗಂಗಾವತಿ ತಾಲೂಕಿನ ಗಡ್ಡಿ ಗ್ರಾಮದ ಸದ್ಥರ್ಮ ಶ್ರೀ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ತಾಲೂಕಿನ ಚಿಕ್ಕಮಾದಿನಾಳ, ಹಿರೇ ಮಾದಿನಾಳ ಗ್ರಾಮದಿಂದ ಪರೀಕ್ಷೆ ಬರೆಯಲು ತೆರಳುತ್ತಿದ್ದರು. ಹಿರೇ ಮಾದಿನಾಳದಲ್ಲಿ ಮಕ್ಕಳನ್ನು ಹತ್ತಿಸಿಕೊಂಡು ವಿಠಲಾಪುರ ಕೆರೆ ಬಂದಾಗ ಘಟನೆ ಸಂಭವಿಸಿದೆ. ವಾಹನ ಪಲ್ಟಿಯಾಗಿ ಕೆಸರಿನಲ್ಲಿ ಬಿದ್ದ ಮಕ್ಕಳನ್ನು ನರೇಗಾ ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರು ರಕ್ಷಣೆ ಮಾಡಿದ್ದಾರೆ.

ಒಂದೇ ವಾಹನದಲ್ಲಿ 27 ವಿದ್ಯಾರ್ಥಿಗಳನ್ನು ತುಂಬಿಕೊಂಡು ದಿನನಿತ್ಯ ಓಡಾಡುತ್ತಿದ್ದು, ದೊಡ್ಡ ವಾಹನ ನಿಯೋಜಿಸುವಂತೆ ತಿಳಿಸಿದರೂ ಆಡಳಿತ ಮಂಡಳಿ ಗಮನ ಹರಿಸಲಿಲ್ಲ ಎಂದು ಪಾಲಕರು ತಿಳಿಸಿದರು. ಗ್ರಾಮಗಳಿಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸುತ್ತಿದ್ದೇವೆ. ಮಕ್ಕಳಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಕೆಲ ವಿದ್ಯಾರ್ಥಿಗಳಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಸದ್ಥರ್ಮ ಶ್ರೀ ಗುರುಕುಲ ಮುಖ್ಯಶಿಕ್ಷಕಿ ಶೃತಿ ಪಾಟೀಲ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net