ವಾಲ್ಮೀಕಿಯನ್ನು ಒಂದೇ ಜಾತಿಗೆ ಸೀಮಿತಗೊಳಿಸದಿರಿ

Valmiki Jayanti celebrations
ಕನಕಗಿರಿ ತಾಲೂಕಿನ ಮಲ್ಲಿಗೆವಾಡದಲ್ಲಿ ಮಹರ್ಷಿ ವಾಲ್ಮೀಕಿ ಹಾಗೂ ಮದಕರಿ ನಾಯಕ ಜಯಂತಿ ನಿಮಿತ್ತ ಭಾವಚಿತ್ರ ಮೆರವಣಿಗೆ ಮಾಡಲಾಯಿತು. ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಸಿದ್ದಪ್ಪ ನಿರ್ಲೂಟಿ, ಪ್ರಮುಖರಾದ ಮುದಿಯಪ್ಪ ನಾಯಕ, ದೇವೇಂದ್ರಪ್ಪ ತೋಳದ, ಶರಣಪ್ಪ ನವಲಳ್ಳಿ, ತಿರುಪತಿ ಏಳುಬೆಂಚಿ ಇತರರಿದ್ದರು.
Published on

ಕನಕಗಿರಿ: ಹಿಂದುಗಳು ಪೂಜಿಸುವ ರಾಮಾಯಣವನ್ನು ರಚಿಸಿದ ಮಹರ್ಷಿ ವಾಲ್ಮೀಕಿ ಅವರನ್ನು ಒಂದೇ ಜಾತಿಗೆ ಸೀಮಿತಗೊಳಿಸದೆ ಎಲ್ಲರೂ ಆರಾಧಿಸಬೇಕು ಎಂದು ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಸಿದ್ದಪ್ಪ ನಿರ್ಲೂಟಿ ಹೇಳಿದರು.

ತಾಲೂಕಿನ ಮಲ್ಲಿಗೆವಾಡದಲ್ಲಿ ವಾಲ್ಮೀಕಿ ಸಮುದಾಯದಿಂದ ಗುರುವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಹಾಗೂ ವೀರ ಮದಕರಿ ನಾಯಕ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಾಲ್ಮೀಕಿ ಬರೆದ ರಾಮಾಯಣ 24,000 ಶ್ಲೋಕಗಳು ಮತ್ತು ಏಳು ಖಂಡಗಳನ್ನು ಒಳಗೊಂಡಿದೆ. ಬ್ರಿಟಿಷ್ ವಿಡಂಬನಕಾರ ವಾಲ್ಮೀಕಿ ಕುರಿತು ಸಾಹಿತ್ಯ ಪ್ರತಿಭೆ ಎಂದು ಕರೆದಿದ್ದರು. ರಾಮಾಯಣ ಹಲವು ಸಾಹಿತಿಗಳಿಗೆ ಬರವಣಿಗೆಗೆ ಪೂರಕವಾಗಿದೆ ಎಂದರು. ವಾಲ್ಮೀಕಿ ದೇವಸ್ಥಾನದಲ್ಲಿ ಅಭಿಷೇಕ, ಕಳಸಾರೋಹಣ ನೆರವೇರಿತು. ನಂತರ ಜನಪದ ವಾದ್ಯ ಮೇಳದೊಂದಿಗೆ ಮಹರ್ಷಿ ವಾಲ್ಮೀಕಿ ಹಾಗೂ ವೀರ ಮದಕರಿ ನಾಯಕ ಭಾವಚಿತ್ರ ಮೆರವಣಿಗೆ ಮಾಡಲಾಯಿತು. ಅನ್ನಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.

ಸಮಾಜದ ಗುರುಗಳಾದ ರಾಜಾ ನವೀನಚಂದ್ರ ನಾಯಕ, ಪ್ರಮುಖರಾದ ಮೌನೇಶ ದಢೇಸುಗೂರು, ದೇವೇಂದ್ರಪ್ಪ ತೋಳಪ್ಪ, ಬಸನಗೌಡ, ಮುದಿಯಪ್ಪ ನಾಯಕ, ಶರಣಪ್ಪ ನವಲಳ್ಳಿ, ತಿರುಪತಿ ಏಳುಬೆಂಚಿ, ರಾಮಸ್ವಾಮಿ ವಾಲೇಕಾರ, ಶರಣಪ್ಪ ಹೆಬ್ಬುಲಿ, ಮಹಾಂತೇಶ ನಾಯಕ, ದುರುಗೇಶ ನಾಯಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net