ಬೇಡಿಕೆಗಿಂತ ಹೆಚ್ಚಿಗೆ ಪೂರೈಕೆ

Kanakagiri BJP protest
ಕನಕಗಿರಿಯಲ್ಲಿ ಯೂರಿಯಾ ಗೊಬ್ಬರ ವಿತರಣೆಯಲ್ಲಿ ಎಡವಿದ ಸರ್ಕಾರದ ನಡೆ ಖಂಡಿಸಿ ಬಿಜೆಪಿಯಿಂದ ಶುಕ್ರವಾರ ಪ್ರತಿಭಟನೆ ನಡೆಯಿತು. ಹರೀಶ ಪೂಜಾರ, ಅರುಣ ಭೂಸನೂರು ಮಠ, ಶಿವಕುಮಾರ ಕೋರಿ, ರಾಚಪ್ಪ ಇತರರಿದ್ದರು.
Published on

ಕನಕಗಿರಿ: ಯೂರಿಯಾ ರಸಗೊಬ್ಬರ ವಿತರಣೆಯಲ್ಲಿ ಎಡವಿದ ರಾಜ್ಯ ಸರ್ಕಾರದ ನಡೆ ಖಂಡಿಸಿ ಬಿಜೆಪಿ ರೈತ ಮೋರ್ಚಾದಿಂದ ಶುಕ್ರವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಯಿತು. ಮೇಲುಗಡೆ ಅಗಸೆಯಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ, ವಾಲ್ಮೀಕಿ ವೃತ್ತದವರೆಗೆ ನಡೆಯಿತು.

ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಲಾಯಿತು. ರಾಜ್ಯ ಸರ್ಕಾರ ನೀಡಿದ ಬೇಡಿಕೆಗಿಂತ ಕೇಂದ್ರ ಸರ್ಕಾರವು ಹೆಚ್ಚಿಗೆ ರಸಗೊಬ್ಬರ ಪೂರೈಸಿದೆ. ಕಾಂಗ್ರೆಸ್‌ನವರು ಕಾಳಸಂತೆಯಲ್ಲಿ ಮಾರಿಕೊಂಡಿದ್ದಾರೆ. ಇದು ರೈತ ವಿರೋಧಿ ಸರ್ಕಾರವಾಗಿದೆ ಎಂದು ಆರೋಪಿಸಲಾಯಿತು.

ಪ್ರಮುಖರಾದ ತಿಪ್ಪೇರುದ್ರಸ್ವಾಮಿ, ಸಣ್ಣ ಕನಕಪ್ಪ, ಮಹಾಂತೇಶ ಸಜ್ಜನ್, ವಾಗೇಶ ಹಿರೇಮಠ, ರಂಗಪ್ಪ ಕೊರಗಟಗಿ, ಹರೀಶ ಪೂಜಾರ, ಅರುಣ ಭೂಸನೂರು ಮಠ, ಶಿವಕುಮಾರ ಕೋರಿ, ರಾಚಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net