ಕನಕಾಚಲಪತಿ ಶೇಷೋತ್ಸವ ಅದ್ದೂರಿ

festival of Kanakachalapati God
ಕನಕಾಚಲಪತಿ ಜಾತ್ರಾ ಮಹೋತ್ಸವದ ನಿಮಿತ್ತ ಬುಧವಾರ ಶೇಷೋತ್ಸವ ವಿಜೃಂಭಣೆಯಿಂದ ಜರುಗಿತು.
Published on

ಕನಕಗಿರಿ: ಇಲ್ಲಿನ ಶ್ರೀ ಕನಕಾಚಲಪತಿ ದೇವರ ಜಾತ್ರಾ ಮಹೋತ್ಸವದ ನಿಮಿತ್ತ ಬುಧವಾರ ಶೇಷೋತ್ಸವ ಅದ್ದೂರಿಯಾಗಿ ನಡೆಯಿತು.

ಬಿರು ಬಿಸಿಲಿನಲ್ಲಿ ಆರಂಭಗೊಂಡ ಉತ್ಸವ ಮೆರವಣಿಗೆಯಲ್ಲಿ ನೂರಾರು ಭಕ್ತರು ಪಾಲ್ಗೊಂಡು ಪುಷ್ಪ, ತೆಂಗಿನಕಾಯಿ, ಆರತಿ ಸೇವೆ ಸಲ್ಲಿಸಿದರು. ರಾಜಬೀದಿಯಲ್ಲಿ ಬಾಜಾ ಭಜಂತ್ರಿಯೊಂದಿಗೆ ನಡೆದ ಮೆರವಣಿಗೆ ವೇಳೆ ಗೋವಿಂದಾ ಗೋವಿಂದ... ಎನ್ನುವ ನಾಮ ಸ್ಮರಣೆ ನಡೆಯಿತು. ದೇವಸ್ಥಾನದಲ್ಲಿ ಪಂಚಾಮೃತ, ಜಲ, ಪುಷ್ಪ, ಕುಂಕುಮಾರ್ಚನೆ, ನೈವೇದ್ಯ ಸೇರಿ ನಾನಾ ಧಾರ್ಮಿಕ ಕಾರ್ಯಕ್ರಮಗಳು ಶದ್ಧಾಭಕ್ತಿಯಿಂದ ನೆರವೇರಿದವು.

ತಹಸೀಲ್ದಾರ ವಿಶ್ವನಾಥ ಮುರುಡಿ, ಪಪಂ ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆ, ದೇವಸ್ಥಾನ ಕಾರ್ಯದರ್ಶಿ ಸಿದ್ದಲಿಂಗಯ್ಯಸ್ವಾಮಿ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಾಗರಾಜ ತೆಗ್ಯಾಳ, ಅರ್ಚಕರಾದ ಪುರುಷೋತ್ತಮ, ಮಧುರಕವಿ, ಸಿಂಗ್ರಾಚಾರ್, ದೇಶಿಕಾಚಾರ್, ಪ್ರಮುಖರಾದ ಕನಕರೆಡ್ಡಿ ಮಹಲಿನಮನಿ, ರಾಮಣ್ಣ ಪಿನ್ನಿ, ನಜೀರಸಾಬ ಗೋರಳ್ಳಿ, ಸೋಮನಾಥ ತಿಮ್ಮಾಪೂರ, ಶಾಮಣ್ಣ ರಜಪೂತ, ರಂಗಪ್ಪ ನಾಯಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net