ಕನಕಗಿರಿ ತಾಲೂಕಿನ ಹಲವೆಡೆ ಉತ್ತಮ ಮಳೆ

RAIN
ಕನಕಗಿರಿಯ ಸಚಿವ ಶಿವರಾಜ ತಂಗಡಗಿ ಕಚೇರಿ ಸುತ್ತ ಮಳೆ ನೀರು ನಿಂತಿರುವುದು.
Published on

ಕನಕಗಿರಿ: ಪಟ್ಟಣ ಮತ್ತು ಸುತ್ತಲಿನ ಕೆಲ ಗ್ರಾಮಗಳಲ್ಲಿ ಸೋಮವಾರ ತಡರಾತ್ರಿ ಹಾಗೂ ಮಂಗಳವಾರ ಮಧ್ಯಾಹ್ನ ಉತ್ತಮ ಮಳೆಯಾಗಿದ್ದರಿಂದ ರೈತರು ಸಂತಸಗೊಂಡಿದ್ದಾರೆ.

ಪಟ್ಟಣ ಹಾಗೂ ತಾಲೂಕಿನ ಕಲಕೇರಿ, ಬೆನಕನಾಳ ಗ್ರಾಮಗಳಲ್ಲಿ ಸೋಮವಾರ ತಡರಾತ್ರಿ ಉತ್ತಮ ಮಳೆ ಸುರಿದಿದ್ದು, ಜಮೀನುಗಳ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದೆ. ಕಳೆದ ಒಂದು ತಿಂಗಳಿಂದ ಮಳೆಯಿಲ್ಲದ್ದರಿಂದ ಬಾಡುವ ಹಂತಕ್ಕೆ ತಲುಪಿದ್ದ ಬೆಳೆಗಳಿಗೆ ಜೀವ ಕಳೆ ಬಂದಿದೆ. 14ನೇ ವಾರ್ಡ್‌ನಲ್ಲಿ ಮಳೆಗೆ ಮರದ ಕೊಂಬೆ ಮುರಿದು ವಿದ್ಯುತ್ ತಂತಿಗಳ ಮೇಲೆ ಬಿದ್ದಿದ್ದು, ತಂತಿಗಳು ತುಂಡಾಗಿವೆ. ಜೆಸ್ಕಾಂ ಸಿಬ್ಬಂದಿಯ ಮುನ್ನೆಚ್ಚರಿಕಾ ಕ್ರಮದಿಂದ ಯಾವುದೇ ಅಪಾಯ ಸಂಭವಿಸಿಲ್ಲ.

ಪಟ್ಟಣದ ತಗ್ಗು ಪ್ರದೇಶಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಕಚೇರಿ ಸುತ್ತ ಮೂರು ಅಡಿಯಷ್ಟು ನೀರು ನಿಂತುಕೊಂಡಿದ್ದು, ಸಾರ್ವಜನಿಕರು ಸಂಚರಿಸುವುದು ಕಷ್ಟಕರವಾಗಿದೆ. ಮಾಹಿತಿ ತಿಳಿದು ಪಪಂ ಮುಖ್ಯಾಧಿಕಾರಿ ಸಿಬ್ಬಂದಿಯೊಂದಿಗೆ ಸ್ಥಳಕ್ಕಾಗಮಿಸಿ ಸಚಿವರ ಕಾರ್ಯಾಲಯ ಸುತ್ತಲಿನ ನೀರನ್ನು ಮುಂದಕ್ಕೆ ಹರಿಸಲು ಮುಂದಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net