ಜೆಜೆಎಂ ಯೋಜನೆಯಡಿ ನೀರು ಪೂರೈಸಿ

MANAVI SALIKE
ಕನಕಗಿರಿ ರೈತ ಸಂಘದ ತಾಲೂಕು ಘಟಕದಿಂದ ಪಿಡಿಒ ಬಸವರಾಜ ಸಂಕನಾಳಗೆ ಕಾರ್ಯಾಧ್ಯಕ್ಷ ಹನುಮೇಶ ಪೂಜಾರಿ, ಉಪಾಧ್ಯಕ್ಷ ನಿಂಗಪ್ಪ ಮನವಿ ಸಲ್ಲಿಸಿದರು.
Published on

ಕನಕಗಿರಿ: ತಾಲೂಕಿನ ಚಿಕ್ಕಮಾದಿನಾಳ ಗ್ರಾಪಂ ವ್ಯಾಪ್ತಿಯ ನಾಗಲಾಪುರ ಗ್ರಾಮದಲ್ಲಿ ಶುದ್ಧ ಕುಡಿವ ನೀರಿನ ಘಟಕ ಹಾಗೂ ಜೆಜೆಎಂ ಯೋಜನೆಯಡಿ ನಳಗಳಿಗೆ ನೀರು ಪೂರೈಸುವಂತೆ ಆಗ್ರಹಿಸಿ ರೈತ ಸಂಘ ತಾಲೂಕು ಘಟಕದಿಂದ ಪಿಡಿಒ ಬಸವರಾಜ ಸಂಕನಾಳಗೆ ಗುರುವಾರ ಮನವಿ ಸಲ್ಲಿಸಲಾಯಿತು.

ನಾಗಲಾಪುರಕ್ಕೆ ಶುದ್ಧ ಕುಡಿವ ನೀರಿನ ಘಟಕ ಇದ್ದೂ ಇಲ್ಲದಂತಿದೆ. ಕಳೆದ ಎರಡು ವರ್ಷಗಳ ಹಿಂದೆಯೇ ಜಲ ಜೀವನ್ ಮಿಷನ್ ಕಾಮಗಾರಿ ಪೂರ್ಣಗೊಂಡರೂ ಇದುವರೆಗೆ ಸರಬರಾಜು ಮಾಡಿಲ್ಲ. ನೀರು ಸರಬರಾಜು ಮಾಡದೆ ಇರುವುದರಿಂದ ಗ್ರಾಮದಲ್ಲಿ ಮನೆ-ಮನೆಗೆ ನಲ್ಲಿಗಳೊಂದಿಗೆ ಅಳವಡಿಸಲಾಗಿದ್ದ ಮೀಟರ್ ಹಾಳಾಗಿವೆ. ಗ್ರಾಮಸ್ಥರು ಹಳೇ ಪೈಪ್‌ಲೈನ್‌ಗೆ ತೆರಿಗೆ ಪಾವತಿಸಿ ನಲ್ಲಿ ಹಾಕಿಕೊಂಡಿದ್ದಾರೆ.

ಈ ಬಗ್ಗೆ ಪಿಡಿಒ ಹಾಗೂ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಗಮನಕ್ಕೆ ತಂದರೆ ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ರೈತ ಸಂಘದ ತಾಲೂಕು ಉಪಾಧ್ಯಕ್ಷ ನಿಂಗಪ್ಪ ಹುಡೇಜಾಲಿ ಆರೋಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net