

ಕನಕಗಿರಿ: ತಾಲೂಕಿನ ಸುಳೇಕಲ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ನಟೇಶ್ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶಾಲೆಯಲ್ಲಿನ ಭೌತಿಕ ಸೌಲಭ್ಯಗಳ ಕುರಿತು ಪ್ರಭಾರ ಮುಖ್ಯ ಶಿಕ್ಷಕ ಸಿದ್ಧಾರೂಢ ಬಣಕಾರ ಅವರಿಂದ ಮಾಹಿತಿ ಪಡೆದುಕೊಂಡರು. ಶಾಲೆಯಲ್ಲಿನ ವ್ಯವಸ್ಥೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಎಲ್‌ಕೆಜಿ ಹಾಗೂ ಯುಕೆಜಿ ತರಗತಿಗಳಿಗೆ ಮಕ್ಕಳ ಆಕರ್ಷಣೆಗಾಗಿ ಕೊಠಡಿಗೆ ಬಿಡಿಸಿರುವ ಚಿತ್ರಗಳು ಹಾಗೂ ಶಾಲೆಯ ಸ್ವಚ್ಛತೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಅಲ್ಲದೇ, ಅಕ್ಷರ ಆವಿಷ್ಕಾರ ಯೋಜನೆಯಡಿ ಎಲ್‌ಕೆಜಿ ಯುಕೆಜಿ ಮಕ್ಕಳಿಗಾಗಿ ಖರೀದಿಸಲಾಗಿರುವ ಪೀಠೋಪಕರಣ ಹಾಗೂ ಆಟದ ಸಾಮಗ್ರಿಗಳನ್ನು ಪರಿಶೀಲನೆ ನಡೆಸಿ ಮಕ್ಕಳೊಂದಿಗೆ ಕೆಲ ಕಾಲ ಚರ್ಚಿಸಿದರು.
ಬಿಸಿಯೂಟದ ಕೋಣೆ ಹಾಗೂ ದಾಸ್ತಾನು ಕೊಠಡಿಯಲ್ಲಿ ಆಹಾರ ದಾಸ್ತಾನು ಸರಿಯಾಗಿ ನಿರ್ವಹಣೆಯಾಗುತ್ತಿರುವ ಬಗ್ಗೆ ತಿಳಿದುಕೊಂಡರು. ಸಂಕಲನಾತ್ಮಕ ಪರೀಕ್ಷೆ-2 ಸಂಬಂಧಿಸಿದಂತೆ ಆಯಾ ಶಿಕ್ಷಕರಿಂದ ಮಾಹಿತಿ ಪಡೆದು ಸೂಕ್ತ ಮಾರ್ಗದರ್ಶನ ನೀಡಿದರು. ಶಿಕ್ಷಕರಾದ ವೀರೇಶ ಡಿ.ಸಿ., ರೇಣುಕಾ, ಮೌನೇಶ, ವೀರೇಶ, ಮೈಬೂಬ್‌ಸಾಬ್, ನೀಲಮ್ಮ, ಉಡುಚಪ್ಪ. ದೇವರೆಡ್ಡಿ ಇತರರಿದ್ದರು.