

ಕನಕಗಿರಿ: ಮಹಾಭಾರತದಲ್ಲಿ ಬರುವ ಕೌರವ, ಪಾಂಡುವರ ನಡುವಿನ ಯುದ್ಧ ಸಂದರ್ಭಗಳಲ್ಲಿ ಅನ್ಯಾಯ, ಮೋಸಕ್ಕೆ ಒಳಗಾದವರನ್ನು ಹಾಗೂ ಧರ್ಮ, ಸತ್ಯದಿಂದ ನಡೆದುಕೊಂಡವರನ್ನು ಶ್ರೀಕೃಷ್ಣ ಸಂರಕ್ಷಣೆ ಮಾಡುತ್ತಿದ್ದ ಎಂದು ಕರಡೋಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಹನುಮಂತಪ್ಪ ಮಂದಲಾ ಹೇಳಿದರು.
ತಾಲೂಕಿನ ಗುಡುದೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶ್ರೀಕೃಷ್ಣ ಜನ್ಮಾಷ್ಟಮಿಯಲ್ಲಿ ಮಾತನಾಡಿದರು. ಶ್ರೀಕೃಷ್ಣ ಎಲ್ಲರಿಗೂ ಪ್ರೇರಣಾದಾಯಕ. ಅಹಂಕಾರ, ಅಸೂಹೆ ಕಿತ್ತೆಸೆದು ಶ್ರೀಕೃಷ್ಣನ ಆದರ್ಶಗಳಂತೆ ನಾವುಗಳು ಜೀವನ ಸಾಗಿಸಬೇಕು. ಆತನ ಆದರ್ಶಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕಿದೆ ಎಂದರು.
ವಿದ್ಯಾರ್ಥಿಗಳು ರಾಧೆ, ಕೃಷ್ಣಯರ ವೇಷ ಧರಿಸಿ ಗಮನ ಸೆಳೆದರು. ಮುಖ್ಯ ಶಿಕ್ಷಕ ಯಮನೂರಪ್ಪ, ಶಿಕ್ಷಕಿ ಗಾಯತ್ರಿ, ಎಸ್‌ಡಿಎಂಸಿ ಅಧ್ಯಕ್ಷ ಕನಕಪ್ಪ ಯಾದವ್, ಸದಸ್ಯರಾದ ತೆಲಗಪ್ಪ ಕಾರಪುಡಿ, ಪಾಮಣ್ಣ ವಕ್ರಾಣಿ, ಹನುಮೇಶ ತಳವಾರ, ವೆಂಕಟೇಶ ಗೊಬ್ಬಿ, ಹಿರಿಯರಾದ ಹಿರೇ ಹನುಮಂತ ದಳಪತಿ, ಗಿರಿಯಪ್ಪ ಗೋಡಿನಾಳ, ಭೀಮನಗೌಡ ಜೀರಾಳ, ದೇವೇಂದ್ರ ಈಡಿಗೇರ, ಉಮೇಶ ನಾಯಕ ಇತರರಿದ್ದರು.