ಶ್ರೀದೇವಿ-ಭೂದೇವಿಗೆ 10 ತೊಲ ಬಂಗಾರ ಕಾಣಿಕೆ

Kanakagiri garudaseva minister shivaraj tangadagi
ಕನಕಗಿರಿಯ ಶ್ರೀ ಕನಕಾಚಲಪತಿ ದೇವಸ್ಥಾನದಲ್ಲಿ ಸೋಮವಾರ ರಾತ್ರಿ ನಡೆದ ಗರುಡೋತ್ಸವದಲ್ಲಿ ಸಚಿವ ಶಿವರಾಜ ತಂಗಡಗಿ ಭಾಗವಹಿಸಿದ್ದರು.
Published on

ಕನಕಗಿರಿ: ಇಲ್ಲಿನ ಶ್ರೀ ಕನಕಾಚಲ ದೇವಸ್ಥಾನದಲ್ಲಿ ಸಚಿವ ಶಿವರಾಜ ತಂಗಡಗಿ ಹಾಗೂ ಕುಟುಂಬಸ್ಥರಿಂದ ಲೋಕ ಕಲ್ಯಾಣಾರ್ಥ ಸೋಮವಾರ ರಾತ್ರಿ ಹಮ್ಮಿಕೊಳ್ಳಲಾಗಿದ್ದ ಗರುಡೋತ್ಸವ ಸೇವೆಯಲ್ಲಿ ಸಚಿವರ ಪುತ್ರ ಶಶಾಂಕ ತಂಗಡಗಿ 100 ಗ್ರಾಂ ಚಿನ್ನವನ್ನು ಕಾಣಿಕೆಯಾಗಿ ನೀಡಿದ್ದಾರೆ.

ಸಚಿವ ಶಿವರಾಜ ತಂಗಡಗಿ ಮಾತನಾಡಿ, ಶ್ರಾವಣ ಮಾಸವಾಗಿದ್ದರಿಂದ ಲೋಕಕಲ್ಯಾಣಾರ್ಥ ವಾಗಿ ಶ್ರೀ ಕನಕಾಚಲ ದೇವಸ್ಥಾನದಲ್ಲಿ ಗರುಡೋತ್ಸವ ಸೇವೆ ಹಮ್ಮಿಕೊಳ್ಳಲಾಗಿದೆ. ನಮ್ಮ ಕುಟುಂಬಸ್ಥರು ಭಾಗಿಯಾಗಿದ್ದೇವೆ. ಕನಕಾಚಲಪತಿಯ ಆಶೀರ್ವಾ ದದಿಂದ ಮೂರು ಬಾರಿ ಶಾಸಕ ಹಾಗೂ ಸಚಿವನಾಗಿದ್ದು, ಈ ಕ್ಷೇತ್ರದ ಜನತೆಯ ಋಣ ತೀರಿಸಲಾಗುವುದಿಲ್ಲ. ನನ್ನ ಹಿರಿಯ ಸುಪುತ್ರ ಶಶಾಂಕ ದೇವರಿಗೆ ಹರಕೆ ಹೊತ್ತಿಕೊಂಡಿದ್ದು, ಅದರಂತೆ ಶ್ರೀದೇವಿ ಭೂದೇವಿಯವರಿಗೆ 100 ಗ್ರಾಂ ಚಿನ್ನದಲ್ಲಿ 4 ತಾಳಿ, 2 ಸರ, 6 ಗುಂಡುಗಳನ್ನು ಕಾಣಿಕೆಯಾಗಿ ನೀಡಿದ್ದಾನೆ. ಕನಕಾಚಲಪತಿ ಎಲ್ಲರಿಗೂ ಒಳ್ಳೆಯದು ಮಾಡಲೆಂದು ಬೇಡಿಕೊಂಡಿದ್ದೇನೆ ಎಂದರು. ಈ ಹಿಂದೆಯೂ ಸಚಿವ ಶಿವರಾಜ ತಂಗಡಗಿ ಕುಟುಂಬ ಸ್ಥರು ಶ್ರೀ ಕನಕಾಚಲಪತಿಗೆ ಕಿರೀಟ ಧಾರಣೆ ಮಾಡಿದ್ದರು.

ಸಚಿವರ ಪತ್ನಿ ವಿದ್ಯಾ ತಂಗಡಗಿ, ತಾಯಿ ಹುಲಿಗೆಮ್ಮ ತಂಗಡಗಿ, ಸಹೋದರ ರವಿ ತಂಗಡಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರಸ್ವಾಮಿ ಕಲುಬಾಗಿಲಮಠ, ಜಿಪಂ ಮಾಜಿ ಸದಸ್ಯರಾದ ವೀರೇಶ ಸಮಗಂಡಿ, ಅಮರೇಶ ಗೋನಾಳ, ಗ್ಯಾರಂಟಿ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ, ಪ್ರಚಾರ ಸಮಿತಿ ಅಧ್ಯಕ್ಷ ರಮೇಶ ನಾಯಕ, ಪಪಂ ಸದಸ್ಯರಾದ ಕಂಠಿರಂಗಪ್ಪ ನಾಯಕ, ಸಿದ್ದಾರ್ಥ ಕಲುಬಾಗಿಲಮಠ, ರಾಕೇಶ ಕಂಪ್ಲಿ, ಶರಣೇಗೌಡ, ರಾಜಾಸಾಬ ನಂದಾಪುರ, ಅನಿಲ್ ಬಿಜ್ಜಳ, ನಗರ ಘಟಕದ ಅಧ್ಯಕ್ಷ ರವಿಶಂಕರ ಪಾಟೀಲ್, ಪ್ರಮುಖರಾದ ಹೊನ್ನೂರಸಾಬ ಉಪ್ಪು, ಸಿದ್ದಪ್ಪ ನಿರ್ಲೂಟಿ, ಟಿ.ಜೆ. ರಾಮಚಂದ್ರಪ್ಪ, ಕನಕಪ್ಪ ಮ್ಯಾಗಡೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net