ವಿಶ್ವೇಶ್ವರಯ್ಯರ ಕೊಡುಗೆ ಅಪಾರ

Visvesvaraya's birth anniversary
ತಿಪ್ಪನಾಳ ಗ್ರಾಮದ ಸ.ಹಿ.ಪ್ರಾ.ಶಾಲೆಯಲ್ಲಿ ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಜಯಂತಿ ಆಚರಿಸಲಾಯಿತು. ಶಿಕ್ಷಕರಾದ ರಾಮರೆಡ್ಡಿ, ವಿಶ್ವನಾಥ, ಮಂಜುನಾಥ, ಲಕ್ಷ್ಮೀ ಇದ್ದರು.
Published on

ಕನಕಗಿರಿ: ಕೆಆರ್‌ಎಸ್ ಅಣೆಕಟ್ಟಿಗೆ ಸ್ವಯಂ ಚಾಲಿತ ಗೇಟ್ ಹಾಗೂ ಮೈಸೂರು ಸ್ಯಾಂಡಲ್ ಸೋಪು ತಯಾರಿಕಾ ಘಟಕಗಳನ್ನು ನಿರ್ಮಿಸಿ ರಾಜ್ಯ ಹಾಗೂ ದೇಶಕ್ಕೆ ತಮ್ಮದೆ ಕೊಡುಗೆ ನೀಡಿದ ಕೀರ್ತಿ ಸರ್ ಎಂ. ವಿಶ್ವೇಶ್ವರಯ್ಯ ಅವರಿಗೆ ಸಲ್ಲುತ್ತದೆ ಎಂದು ಶಿಕ್ಷಕ ಶಿವಾನಂದ ಹೇಳಿದರು.

ತಾಲೂಕಿನ ತಿಪ್ಪನಾಳ ಗ್ರಾಮದ ಸ.ಹಿ.ಪ್ರಾ.ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಭಾರತರತ್ನ ಖ್ಯಾತ ಇಂಜಿನಿಯರ್ ಸರ್.ಎಂ ವಿಶ್ವೇಶ್ವರಯ್ಯ ಅವರ ಜನ್ಮ ದಿನಾಚರಣೆ ನಿಮಿತ್ತ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.

ಶಿವನ ಸಮುದ್ರ ವಿದ್ಯುತ್ ಸ್ಥಾವರ ಘಟಕ ನಿರ್ಮಿಸಿದ ಭಾರತದ ಮೊದಲ ಇಂಜಿನಿಯರ್ ಎಂಬ ಹೆಗ್ಗಳಿಕೆ ವಿಶ್ವೇಶ್ವರಯ್ಯ ಅವರಿಗೆ ಸಲ್ಲುತ್ತದೆ ಎಂದರು.

ಮುಖ್ಯಶಿಕ್ಷಕ ಕನಕರೆಡ್ಡಿ ಮಾದಿನಾಳ ಮಾತನಾಡಿ, ವಿಶ್ವೇಶ್ವರಯ್ಯ ಅವರು 1885ರಲ್ಲಿ ಬಾಂಬೆಯ ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ಕಾರ್ಯನಿರ್ವಹಿಸಿ, 1909ರಲ್ಲಿ ಮೈಸೂರು ರಾಜ್ಯದ ಮುಖ್ಯ ಇಂಜಿನಿಯರ್ ಆಗಿ ನೇಮಕಗೊಂಡರು. ಅಲ್ಲದೇ ಕೃಷ್ಣರಾಜಸಾಗರ ಹಾಗೂ ತುಂಗಭದ್ರಾ ನದಿಯ ಇಂಜಿನಿಯರ್ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇಂತಹ ಮಹಾನ್ ಸಾಧಕನ ವಿಚಾರಗಳು ಎಂದಿಗೂ ಪ್ರಸ್ತುತ ಎಂದು ಸ್ಮರಿಸಿದರು. ಶಿಕ್ಷಕರಾದ ರಾಮರೆಡ್ಡಿ, ವಿಶ್ವನಾಥ, ಮಂಜುನಾಥ, ಲಕ್ಷ್ಮೀ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net