ಗಜಲಕ್ಷ್ಮೀ ದೇವಿಗೆ ವಿಶೇಷ ಪೂಜೆ

GAJALAKSMI
ಕನಕಗಿರಿಯ ಗಜಲಕ್ಷ್ಮೀ ದೇವಿಗೆ ಕಡೇ ಶ್ರಾವಣ ಸೋಮವಾರ ನಿಮಿತ್ತ ವಿಶೇಷ ಪೂಜೆ ನೆರವೇರಿಸಲಾಯಿತು. ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷೆ ಮಂಜುಳಾ ಬೊಂದಾಡೆ, ಹಿರಿಯರಾದ ಲಕ್ಷ್ಮೀಬಾಯಿ ಬೊಂದಾಡೆ, ಮೋತಿಲಾಲ್ ಹೆಬ್ಬಾರೆ ಇತರರಿದ್ದರು.
Published on

ಕನಕಗಿರಿ: ಶ್ರಾವಣದ ಕೊನೇ ಸೋಮವಾರ ನಿಮಿತ್ತ ಪಟ್ಟಣದ ಗಜಲಕ್ಷ್ಮೀ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.ದೇವಸ್ಥಾನವನ್ನು ಹೂಗಳಿಂದ ಅಲಂಕರಿಸಲಾಗಿತ್ತು. ಬೆಳಗ್ಗೆ ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷೆ ಮಂಜುಳಾ ಬೊಂದಾಡೆ ಅಮಾವಾಸ್ಯೆ ಪೂಜೆಯ ಸೇವೆಗೈದರು. ರೂಪಾ ಬೊಂದಾಡೆ, ಹಿರಿಯರಾದ ಲಕ್ಷ್ಮೀಬಾಯಿ ಬೊಂದಾಡೆ, ಮೋತಿಲಾಲ್ ಹೆಬ್ಬಾರೆ, ಮಂಜುನಾಥ್ ಅಚ್ಚಲ್ಕರ್, ಕಿರಣ್ ಅಚ್ಚಲ್ಕರ್ ವೆಂಕಟೇಶ್ ಬೊಂದಾಡೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net