ಮೌನೇಶ್ವರ ಪಲ್ಲಕ್ಕಿ ಮೆರವಣಿಗೆ ಅದ್ದೂರಿ

Mauneshwar fair
ಕನಕಗಿರಿಯಲ್ಲಿ ಮೌನೇಶ್ವರ ಜಾತ್ರೋತ್ಸವ ನಿಮಿತ್ತ ಪಲ್ಲಕ್ಕಿ ಮೆರವಣಿಗೆ ವಿಜೃಂಭಣೆಯಿಂದ ಜರುಗಿತು.
Published on

ಕನಕಗಿರಿ: ಶ್ರಾವಣ ಮಾಸದ ಕೊನೇ ಗುರುವಾರ ಪಟ್ಟಣದ ಮೌನೇಶ್ವರ ಜಾತ್ರೋತ್ಸವ ನಿಮಿತ್ತ ಪಲ್ಲಕ್ಕಿ ಮೆರವಣಿಗೆ ವಿಜೃಂಭಣೆಯಿಂದ ನೆರವೇರಿತು.

ಮಠದಲ್ಲಿ ಬೆಳಗ್ಗೆ ಅಭಿಷೇಕ, ನವಗ್ರಹ ಹೋಮ, ಸಾಮೂಹಿಕ ಉಪನಯನ ಕಾರ್ಯಕ್ರಮ ಜರುಗಿದವು. ನಂತರ ವಿವಿಧ ಜನಪದ ವಾದ್ಯ ಮೇಳದೊಂದಿಗೆ ಮಠದಿಂದ ಆರಂಭಗೊಂಡ ಪಲ್ಲಕ್ಕಿ ಮೆರವಣಿಗೆ ಕನಕಾಚಲಪತಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ಕಾಳಿಕಾ ದೇವಸ್ಥಾನಕ್ಕೆ ತೆರಳಿ ಆರತಿ, ಪುಷ್ಪಾರ್ಚನೆ ಮಾಡಿದ ಬಳಿಕ ಶ್ರೀಮಠಕ್ಕೆ ಮರಳಿತು.

ಮೆರವಣಿಗೆಯದ್ದಕ್ಕೂ ಭಕ್ತರು ಶಸ್ತ್ರ ಹಾಕಿಸಿಕೊಂಡು ಭಕ್ತಿ ಮೆರೆದರು. ನಂತರ ಅನ್ನ ಸಂತರ್ಪಣೆ ನಡೆಯಿತು. ಹುಲಿಹೈದರ ಗ್ರಾಮದ ವಾಸಪ್ಪ ಕಮ್ಮಾರ್ ತಂಡದಿಂದ ಪುರುವಂತಿಕೆ ನಡೆಯಿತು.

ಲೇಬಗಿರಿ ಗ್ರಾಮದ ಶ್ರೀಮದಾನೆಗುಂದಿ ಸರಸ್ವತಿಪೀಠದ ಅಯ್ಯೇಂದ್ರ ಸ್ವಾಮೀಜಿ, ನಾಗಮೂರ್ತೇಂದ್ರ ಸ್ವಾಮೀಜಿ, ಬ್ರಹ್ಮೇಂದ್ರ ಸ್ವಾಮೀಜಿ, ದಿವಾಕರ ಸ್ವಾಮೀಜಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net