ಭಾರತೀಯ ಸೇನೆಯಿಂದ ಪಾಕ್‌ಗೆ ತಕ್ಕ ಉತ್ತರ

knk-1
ಕನಕಗಿರಿ ಪಾಂಡುರಂಗ ದೇವಸ್ಥಾನದಲ್ಲಿ ಭಾರತೀಯ ಸೇನೆ ಯುದ್ಧದಲ್ಲಿ ಜಯಶಾಲಿ ಆಗಲಿ ಎಂದು ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಸಮಾಜದ ಅಧ್ಯಕ್ಷ ರಮೇಶ ಅಚ್ಚಲಕರ, ಜಂಬುನಾಥ ಬೊಂದಾಡೆ, ಪಾಂಡುರಂಗ ಟ್ರಸ್ಟ್ ಅಧ್ಯಕ್ಷ ಸುರೇಶಪ್ಪ ಬೊಂದಾಡೆ, ಪ್ರಮುಖರಾದ ಲಕ್ಷ್ಮಣ ಡಿ., ಗುರುರಾಜ, ಶಂಕ್ರಪ್ಪ ಮೋತಿಲಾಲ ಸಂತರು, ಲಿಂಬೆಪ್ಪ ಪೂಜಾರಿ ಇದ್ದರು.
Published on

ಕನಕಗಿರಿ: ಭಾರತೀಯ ಪ್ರವಾಸಿಗರ ಮೇಲಿನ ಗುಂಡಿನ ದಾಳಿ ನಡೆಸಿದ ಪಾಕ್ ಉಗ್ರರ ಕೃತ್ಯವನ್ನು ಖಂಡಿಸಿ ಹಾಗೂ ಭಾರತದ ಯುದ್ಧ ಯಶಸ್ವಿಯಾಗಲೆಂದು ಪ್ರಾರ್ಥಿಸಿ ಭಾವಸಾರ ಕ್ಷತ್ರಿಯ ಸಮಾಜದಿಂದ ಶನಿವಾರ ಪಟ್ಟಣದ ಪಾಂಡುರಂಗ-ರುಕ್ಮಿಣಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಸಮಾಜದ ಮುಖಂಡ ಅಂಭಾಜಿರಾವ್ ಬೊಂದಾಡೆ ಮಾತನಾಡಿ, ಕಾಶ್ಮೀರದ ಪಹಲ್ಗಾಮ್ ಪ್ರದೇಶದ ಸೌಂದರ್ಯ ವೀಕ್ಷಣೆಗೆ ತೆರಳಿದ್ದ ಅಮಾಯಕ ಭಾರತೀಯರು, ಅದರಲ್ಲೂ ಹಿಂದುಗಳನ್ನು ಗುರುತಿಸಿ ವಿಕೃತವಾಗಿ ಕೊಲೆಗೈದ ಉಗ್ರರ ಹೆಡೆಮುರಿ ಕಟ್ಟುವ ಕೆಲಸಲ್ಲಿ ಭಾರತೀಯ ಸೇನೆ ನಿಂತಿದೆ.

ನಮ್ಮದು ವಸುಧೈವ ಕುಟುಂಬಕಂ ತತ್ವವಾಗಿದೆ. ಆದರೆ, ಪಾಕಿಸ್ತಾನಿ ಉಗ್ರರು ಭಾರತದ ಸಂಸ್ಕೃತಿ, ಪರಂಪರೆ, ಧರ್ಮದ ಮೇಲೆ ದಾಳಿ ನಡೆಸಿದ್ದಾರೆ. ಈ ಕ್ರಮವನ್ನು ದೇಶದ ಜನತೆ ಸಹಿಸುವುದಿಲ್ಲ.

ಪ್ರಧಾನಿ ನರೇಂದ್ರ ಮೋದಿ ಅವರಂಥ ಸಮರ್ಥ ನಾಯಕನಿಂದ ಪಾಕಿಸ್ತಾನಕ್ಕೆ ಯುದ್ಧದ ಮೂಲಕ ಉತ್ತರ ಕೊಡುವ ಕೆಲಸ ನಡೆದಿದೆ. ಈ ಯುದ್ಧದ ಕಾರ್ಯ ಯಶಸ್ವಿಯಾಗಲಿ, ಭಾರತಕ್ಕೆ ಜಯ ಸಿಗಲಿ ಎಂದು ಆಶಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net