ಶಾಲೆಯ ಕಳೆ ಹೆಚ್ಚಿಸಿದ ಪರಿಸರ ಪ್ರೇಮ ತಂಡ

Kanakagiri School colour
ಕನಕಗಿರಿ ತಾಲೂಕಿನ ಇಂಗಳದಾಳ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಜಿಪಂ ಉಪಕಾರ್ಯದರ್ಶಿ ಮಲ್ಲಪ್ಪ ತೊದಲಬಾಗಿ ನೇತೃತ್ವದ ಪರಿಸರ ಪ್ರೇಮ ತಂಡ ಸುಣ್ಣ-ಬಣ್ಣ ಬಳಿಯುವ ಮೂಲಕ ಸುಂದರಗೊಳಿಸಿತು. ತಾಪಂ ಇಒ ಚಂದ್ರಶೇಖರ್ ಕಂದಕೂರು, ಪಿಡಿಒಗಳಾದ ನಾಗೇಶ್, ಅಮರೇಶ ರಾಠೋಡ್ ಇತರರಿದ್ದರು.
Published on

ಕನಕಗಿರಿ: ತಾಲೂಕಿನ ಇಂಗಳದಾಳ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಸುಣ್ಣ-ಬಣ್ಣ ಬಳಿದು ಸುಂದರಗೊಳಿಸುವ ಮೂಲಕ ಜಿಪಂ ಉಪ ಕಾರ್ಯದರ್ಶಿ ಮಲ್ಲಪ್ಪ ತೊದಲಬಾಗಿ ನೇತೃತ್ವದ ಪರಿಸರ ಪ್ರೇಮ ತಂಡ ಶಾಲೆಗಳ ರಕ್ಷಣೆಗೆ ಮುಂದಾಗಿದೆ.

7ನೇ ವಾರದ ಶ್ರಮದಾನ ಕಾರ್ಯಕ್ರಮ ಇದಾಗಿದ್ದು, ಸರ್ಕಾರಿ ಶಾಲೆ ಉಳಿವಿಗೆ ಮತ್ತು ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಇದರ ಅಂಗವಾಗಿ

20 ಸಸಿ ನೆಡುವ, ಆರೋಗ್ಯ ತಪಾಸಣಾ ಉಚಿತ ಶಿಬಿರ ನಡೆಯಿತು. ತಾಪಂ ಇಒ ಚಂದ್ರಶೇಖರ್ ಕಂದಕೂರು, ಗ್ರಾಪಂ ಅಧ್ಯಕ್ಷೆ ರೇಣುಕಮ್ಮ, ಪಿಡಿಒಗಳಾದ ನಾಗೇಶ್, ಅಮರೇಶ ರಾಠೋಡ್,

ಗ್ರಾಪಂ ಸದಸ್ಯರು, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ಶಾಲಾ ಶಿಕ್ಷಕರು, ಗ್ರಾಮಸ್ಥರು, ಮಕ್ಕಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net