ಒಂದು ತಿಂಗಳ ಕಾಲ ಅಭಿಷೇಕ ಕಾರ್ಯಕ್ರಮ

Untitled design (1)
ಕನಕಗಿರಿಯ ಐತಿಹಾಸಿಕ ಶ್ರೀ ಸಂಗಮೇಶ್ವರ ದೇವರಿಗೆ ಗುರುವಾರ ವಿಶೇಷ ಪೂಜೆ ಸಲ್ಲಿಸಲಾಯಿತು.
Published on

ಕನಕಗಿರಿ: ಪಟ್ಟಣದ 10ನೇ ವಾರ್ಡ್‌ನ ಸಂಗಮೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಅಂಗವಾಗಿ ಹಮ್ಮಿಕೊಂಡಿದ್ದ ವಿಶೇಷ ಪೂಜಾ ಕಾರ್ಯಕ್ರಮ ರುದ್ರಾಭಿಷೇಕದೊಂದಿಗೆ ಗುರುವಾರ ಸಂಪನ್ನಗೊಂಡಿತು.

ದೇವಸ್ಥಾನ ಅರ್ಚಕ ಸೂಗವೀರಯ್ಯಸ್ವಾಮಿ ಮಾತನಾಡಿ, ಶ್ರಾವಣ ಮಾಸದ ಪ್ರಯುಕ್ತ ತಿಂಗಳ ಪಯರ್ಂತ ಅಭಿಷೇಕ, ಪುಷ್ಪಾಲಂಕಾರ, ನೈವೇದ್ಯ ಸೇರಿ ನಾನಾ ಧಾರ್ಮಿಕ ಕಾರ್ಯಗಳು ಶ್ರದ್ಧಾಭಕ್ತಿಯಿಂದ ನಡೆದಿವೆ. ಭಕ್ತರಿಗೆ ದಾಸೋಹ ಹಮ್ಮಿಕೊಳ್ಳುವ ಮೂಲಕ ತಿಂಗಳ ಪಯರ್ಂತ ನಡೆದ ಕಾರ್ಯಕ್ರಮ ಸಂಪನ್ನಗೊಳಿಸಲಾಗಿದೆ ಎಂದು ತಿಳಿಸಿದರು.

ಪ್ರಮುಖರಾದ ಸಂಗಪ್ಪ ಮಿಟ್ಲಕೋಡ್, ಮಲ್ಲಪ್ಪ ಚಿತ್ರಿಕಿ, ಶಿವಾನಂದ ಗೊಂಡಬಾಳಮಠ, ಚನ್ನಯ್ಯಸ್ವಾಮಿ ಮೈಲಾಪೂರಮಠ, ಚಂದ್ರಶೇಖರ ಹಡಪದ, ಶಿವಪ್ಪ ಭಾವಿಕಟ್ಟಿ, ವೀರಭದ್ರಯ್ಯಸ್ವಾಮಿ, ಮುದುಕಪ್ಪ ಕಡಿ, ಶೇಖರಪ್ಪ ಭಾವಿಕಟ್ಟಿ, ಬಸವರಾಜ ಗುಗ್ಗಳಶೆಟ್ರ, ಬಸವರಾಜ ಸಾಲಿಮಠ, ಸಂಗಯ್ಯಸ್ವಾಮಿ, ಕಳಕಪ್ಪ, ಈಶ್ವರಯ್ಯಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net