

ಕನಕಗಿರಿ: ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಗ್ರಾಮ ಸಭೆಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಹುಲಿಹೈದರ ಗ್ರಾಪಂ ಉಪಾಧ್ಯಕ್ಷ ಜಗದೀಶ್ ಗದ್ದಿ ಹೇಳಿದರು.
ಹುಲಿಹೈದರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವರನಖೇಡ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಗ್ರಾಮ ಸಭೆಯಲ್ಲಿ ಸೋಮವಾರ ಮಾತನಾಡಿದರು.
ಗ್ರಾಮದಲ್ಲಿನ ಸಮಸ್ಯೆ ಅರಿತು ಕಾಮಗಾರಿ ಕೈಗೊಳ್ಳಲು ವಿಶೇಷ ಗ್ರಾಮ ಸಭೆ ಹಮ್ಮಿಕೊಳ್ಳಲಾಗುತ್ತದೆ. ಇದರಲ್ಲಿ ಸ್ಥಳೀಯರು ಭಾಗವಹಿಸಿ ಗ್ರಾಮದ ಸಮಸ್ಯೆಗಳನ್ನು ಗಮನಕ್ಕೆ ತಂದಲ್ಲಿ ಪರಿಹರಿಸಲು ಅನುಕೂಲವಾಗುತ್ತದೆ ಎಂದು ಹೇಳಿದರು.
ಗ್ರಾಪಂ ಪಿಡಿಒ ಅಮರೇಶ ರಾಥೋಡ್ ಮಾತನಾಡಿದರು. ಅಧ್ಯಕ್ಷೆ ಶರಣಮ್ಮ ಕೆಲೂರ್ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಗ್ರಾಪಂ ಸದಸ್ಯರಾದ ದೇವಮ್ಮ, ಶಿವಪುತ್ರಪ್ಪ, ಸುನಿತಾ ಹನುಮೇಶ್, ಪ್ರಮುಖರಾದ ಭೀಮಣ್ಣ ಹೂಗಾರ ಇತರರಿದ್ದರು.