ಮಾತೃ ಶಕ್ತಿ ಕೊಡುಗೆ ಅಪಾರ

Untitled design
ಕನಕಗಿರಿಯಲ್ಲಿ ಏರ್ಪಡಿಸಿದ್ದ ಷಷ್ಠಿಪೂರ್ತಿ ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್ ಕಾರ್ಯಕಾರಿಣಿ ಸದಸ್ಯ ಸತ್ಯನಾರಾಯಣ ಮಾತನಾಡಿದರು. ಆರ್‌ಎಸ್‌ಎಸ್ ಮುಖಂಡ ಹನುಮಂತರೆಡ್ಡಿ ಮಹಲಿನಮನಿ, ಸೋಮಶೇಖರಯ್ಯಸ್ವಾಮಿ ಇತರರಿದ್ದರು.
Published on

ಕನಕಗಿರಿ: ಸಾವಿರಾರು ವರ್ಷಗಳ ಇತಿಹಾಸವಿರುವ ಹಿಂದು ಸಮಾಜವು ಮಾತೃಶಕ್ತಿಯಿಂದಲೇ ಸಂರಕ್ಷಣೆಯಾಗಿದೆ ಎಂದು ಆರ್‌ಎಸ್‌ಎಸ್ ಕಾರ್ಯಕಾರಿಣಿ ಸದಸ್ಯ ಸತ್ಯನಾರಾಯಣ ಹೇಳಿದರು.

ವಿಶ್ವ ಹಿಂದು ಪರಿಷತ್‌ಗೆ 60 ವಷರ್ ಪೂರೈಸಿದ ಪ್ರಯುಕ್ತ ಪಟ್ಟಣದ ಕನಕಾಚಲಪತಿ ದೇವಸ್ಥಾನದ ಯಾತ್ರಿನಿವಾಸದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಷಷ್ಠಿಪೂರ್ತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಿಂದು ಸಂಸ್ಕೃತಿ, ಪರಂಪರೆ ಉಳಿವಿಗೆ ಮಾತೃ ಶಕ್ತಿ ಕೊಡುಗೆ ಅಪಾರವಿದೆ. ಧರ್ಮ, ಸಂಸ್ಕೃತಿ, ಪರಂಪರೆ ತಾಯಂದಿರಿಂದ ಬೆಳಗುತ್ತಿದೆ. ಧರ್ಮದ ಉಳಿವಿಗೆ ತಾಯಿಯಾದವಳು ಮಕ್ಕಳನ್ನು ಜಾಗೃತಗೊಳಿಸುವ ಕೆಲಸ ಮಾಡುವುದು ಅನಿವಾರ್ಯವಿದೆ ಎಂದರು.
ವಿಶ್ವ ಹಿಂದು ಪರಿಷತ್ 60 ವರ್ಷದಲ್ಲಿ ಧರ್ಮ, ಸಂಸ್ಕೃತಿ, ಸನಾತನವನ್ನು ಎತ್ತಿ ಹಿಡಿಯುವಲ್ಲಿ ದೇಶಾದ್ಯಂತ ಅನೇಕ ಹೋರಾಟಗಳನ್ನು ನಡೆಸಿದೆ. ಇಂತಹ ಸಂದರ್ಭದಲ್ಲಿ ವಿಎಚ್‌ಪಿ ಸಂಘಟನೆಗೆ ಯುವಕರು ಇನ್ನಷ್ಟು ಶಕ್ತಿ ತುಂಬುವ ಮೂಲಕ ಹಿಂದುತ್ವದ ಸೇವೆಗೈಯಲು ಕೈಜೋಡಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಆರ್‌ಎಸ್‌ಎಸ್ ಮುಖಂಡ ಹನುಮಂತರೆಡ್ಡಿ ಮಹಲಿನಮನಿ ಮಾತನಾಡಿ, ರಾಜಕೀಯ ಸ್ವಾರ್ಥಕ್ಕಾಗಿ ಕೆಲವರು ಹಿಂದುತ್ವವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ಹಿಂದು ಧರ್ಮದ ಉಳಿವಿಗೆ ಹೋರಾಟ ಅನಿವಾರ್ಯ. ಮುಂದಿನ ದಿನಗಳಲ್ಲಿ ಹಿಂದುಗಳು ಅಂತವರಿಗೆ ತಕ್ಕಪಾಠ ಕಲಿಸಲಿದ್ದಾರೆ. ದೇಶ, ಧರ್ಮದ ಸಂರಕ್ಷಣೆಗೆ ಸಂಕಲ್ಪ ತೊಡುವ ಕಾರ್ಯಕ್ಕೆ ಯುವಕರು ಸಕ್ರಿಯವಾಗಿ ಭಾಗವಹಿಸುವಂತೆ ತಿಳಿಸಿದರು.

ವಿಶ್ವ ಹಿಂದು ಪರಿಷತ್ ಜಿಲ್ಲಾ ಕಾರ್ಯದರ್ಶಿ ವಿನಯ ಪಾಟೀಲ್, ಹಿಂದು ಜಾಗರಣ ವೇದಿಕೆ ಸಹ ಸಂಚಾಲಕ ಅಯ್ಯನಗೌಡ ಅಳ್ಳಳ್ಳಿ, ಹಿಂದು ಸಂಘಟನೆಗಳ ಮುಖಂಡರಾದ ವಿಠ್ಠಲ ನಾವಡೆ, ಸೋಮಶೇಖರಯ್ಯಸ್ವಾಮಿ, ವೆಂಕಟೇಶ ಬಂಡ್ಲಿ, ಸಿಂಧು ಬಲ್ಲಾಳ, ಶ್ರೀನಿವಾಸ ಅಂಬಿಗ, ಸಂಪತ್ ಹೋಟೆಲ್, ಹನುಮೇಶ ಡಿಶ್, ರಾಮು, ಪೃಥ್ವಿ ಮ್ಯಾಗೇರಿ, ಕಿರಣಕುಮಾರ ಗಂಗಾಮತ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net