ಗಮನ ಸೆಳೆದ ಜೋಕಾಲಿ ಗಣೇಶ

JOKALI GANESHA
ಕನಕಗಿರಿಯ 13ನೇ ವಾರ್ಡಿನಲ್ಲಿ ಪ್ರತಿಷ್ಠಾಪಿಸಲಾಗಿರುವ ಜೋಕಾಲಿ ಗಣೇಶನೊಂದಿಗೆ ಮಕ್ಕಳು.
Published on

ಕನಕಗಿರಿ: ವಿಘ್ನ ನಿವಾರಕ, ಗೌರಿಸುತ ಗಣೇಶ ಹಬ್ಬವನ್ನು ಪಟ್ಟಣ ಸೇರಿ ತಾಲೂಕಿನ ಗ್ರಾಮಗಳಲ್ಲಿ ಬುಧವಾರ ಸಡಗರದಿಂದ ಆಚರಿಸಲಾಯಿತು.

ಸಾಂಪ್ರದಾಯಿಕವಾಗಿ ಮನೆಯಲ್ಲಿ ಗಣೇಶನನ್ನು ಕೂಡಿಸುವವರು ಬೆಳಗ್ಗೆಯೇ ಗಣಪತಿ ತಂದು ಕೂಡಿಸಿ ರಾತ್ರಿ ಕಳುಹಿಸಿದರೆ, ಕೆಲವು ಮನೆಗಳಲ್ಲಿ ಐದು ದಿನ, ತಿಂಗಳ ಕಾಲ ಗಣೇಶನನ್ನು ಕೂಡಿಸುವ ವಾಡಿಕೆ ಇದ್ದವರು ನಿತ್ಯದ ಪೂಜೆಗೆ ಅಣಿಯಾದರು.

ಇನ್ನು ಸಾರ್ವಜನಿಕವಾಗಿ ಗಣೇಶನನ್ನು ಪ್ರತಿಷ್ಠಾಪಿಸುವವರು ಅಗಾಗ ಸುರಿದ ಜಿಟಿ ಜಿಟಿ ಮಳೆಯಲ್ಲಿಯೇ ಮೆರವಣಿಗೆ ಮೂಲಕ ಗಣೇಶನನ್ನು ತಂದು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದರು. ಪಟ್ಟಣ ಪಂಚಾಯಿತಿ ಮುಂಭಾಗ, ಗಜಲಕ್ಷ್ಮೀ ದೇವಸ್ಥಾನ, ಹೇಮರಡ್ಡಿ ಮಲ್ಲಮ್ಮ ವೃತ್ತ, ಶಿವಾಜಿ ನಗರ ಸೇರಿ ಹಲವು ಕಡೆಗಳಲ್ಲಿ ಬೃಹತ್ ಗಣೇಶನನ್ನು ಪ್ರತಿಷ್ಠಾಪಿಸಲಾಗಿದೆ.

13ನೇ ವಾರ್ಡಿನ ಜೋಕಾಲಿ ಗಣೇಶ ಎಲ್ಲರ ಗಮನ ಸೆಳೆಯುತ್ತಿದ್ದು, ಜೋಕಾಲಿ ಗಣೇಶನೊಂದಿಗೆ ಮಕ್ಕಳು ಜೋಕಾಲಿಯಾಡಿ ಸಂಭ್ರಮಿಸುತ್ತಿರುವುದು ವಿಶೇಷವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net