ನಾಟಕ ವಾಸ್ತವ ಸ್ಥಿತಿಗತಿಯ ಅರಿವು ಮೂಡಿಸಲಿ

UNTILETED 22
Published on

ಕನಕಗಿರಿ: ಇಂದಿನ ಆಧುನಿಕ ಮಾಧ್ಯಮದ ರಿಯಾಲಿಟಿ ಶೋಗಳು ರಂಗಭೂಮಿ ಹಾಗೂ ಕಲಾವಿದರನ್ನು ಬಡತನಕ್ಕೆ ತಳ್ಳುವ ಮೂಲಕ ಮಾರಕವಾಗಿವೆ ಎಂದು ಸಾಹಿತಿ, ಸಾಮಾಜಿಕ ಕಾರ್ಯಕರ್ತ ಅಲ್ಲಾಗಿರಿರಾಜ್ ಕನಕಗಿರಿ ಕಳವಳ ವ್ಯಕ್ತಪಡಿಸಿದರು.

ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ರಂಗಧಾರೆ ಸಂಚಾರಿ ಕೊಪ್ಪಳ ಏರ್ಪಡಿಸಿದ್ದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಪಠ್ಯ ಪುಸ್ತಕ ಆಧಾರಿತ ‘ ಕೃಷ್ಣೆ ಗೌಡರ ಆನೆ ಮತ್ತು ಬೆಪ್ಪ ತಕ್ಕಡಿ ಬೊಳೆಶಂಕರ’ ನಾಟಕಕ್ಕೆ ಚಾಲನೆ ನೀಡಿ ಮಾತನಾಡಿದರು.

ರಂಗಭೂಮಿ ನಾಟಕಗಳು ಉಳಿಯ ಬೇಕಾದರೆ ವಿದ್ಯಾರ್ಥಿಗಳು ಮತ್ತು ಯುವ ಜನತೆ ಕಲೆಯ ಕಡೆಗೆ ಗಮನ ಹರಿಸಬೇಕು. ಅದರಂತೆಯೇ ರಂಗಭೂಮಿ ಕಲಾವಿದರು ಸಮಾಜದ ಮೇಲೆ ಪರಿಣಾಮ ಬೀರುವಂತೆ ಅಭಿನಯಿಸಬೇಕು. ಜತೆಗೆ ಇಂದಿನ ವಾಸ್ತವ ಸ್ಥಿತಿಗತಿ ತಕ್ಕಂತೆ ವಸ್ತು ವಿಷಯ ಆಧಾರಿತ ನಾಟಕಗಳನ್ನು ಆಯ್ಕೆ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.

ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಅಮರೇಶ ದೇವರಾಳ ಮಾತನಾಡಿ, ರಂಗಭೂಮಿ ಕಲೆಗೆ ಕನಕಗಿರಿ ಕೊಡುಗೆ ಅಪಾರವಿದೆ. ಬಯಲಾಟ ಮತ್ತು ವೃತ್ತಿ ರಂಗಭೂಮಿ ಕಲಾವಿದರಿಗೆ ಹೇಳಿ ಮಾಡಿಸಿದ ತಾಣ ಕನಕಗಿರಿ ಎಂದು ಹೇಳಿದರು. ಕಲಾವಿದರಾದ ಶರಣು ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕರಾದ ಪಂಪಾರೆಡ್ಡಿ ಗಚ್ಚಿನಮನಿ, ಶಿವಪುತ್ರಪ್ಪ ಗಳಪೂಜೆ, ರೇಖಾ, ಪರಶುರಾಮ್ ಶಿವಶರಣ, ಹನುಮೇಶಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net