ಮಾರ್ಗಶಿರ ಮಾಸದಲ್ಲಿ ಭವನ ಉದ್ಘಾಟನೆ

RAMBHAPURI
ಕನಕಗಿರಿಯಲ್ಲಿ ಸಮುದಾಯ ಭವನದ ಕಾಮಗಾರಿಯನ್ನು ರಂಭಾಪುರಿ ಜಗದ್ಗುರುಗಳು ಮಂಗಳವಾರ ಪರಿಶೀಲಿಸಿದರು. ಪ್ರಮುಖರಾದ ಸಂಗಯ್ಯಸ್ವಾಮಿ, ಶರಣಪ್ಪ ಸಜ್ಜನ್, ಗಂಗಾಧರ ಸಜ್ಜನ್, ಮೃತ್ಯುಂಜಯ ಸ್ವಾಮಿ ಇತರರಿದ್ದರು.
Published on

ಕನಕಗಿರಿ: ಪಟ್ಟಣದ ರಂಭಾಪುರಿ ಜಗದ್ಗುರು ಶಿವಾನಂದ ರಾಜೇಂದ್ರ ಸಮುದಾಯ ಭವನದ ಕಾಮಗಾರಿ ಮುಕ್ತಾಯ ಹಂತ ತಲುಪಿದ್ದು, ಕಾರ್ತಿಕ ಇಲ್ಲವೇ ಮಾರ್ಗಶಿರ ಮಾಸದಲ್ಲಿ ಉದ್ಘಾಟನೆ ಮಾಡಿ ಭಕ್ತರ ಬಳಕೆಗೆ ಒದಗಿಸಲಾಗುವುದು ಎಂದು ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.

ಮಂಗಳವಾರ ಪಟ್ಟಣಕ್ಕೆ ಆಗಮಿಸಿದ್ದ ಅವರು, ಸಮುದಾಯ ಭವನದ ಕಾಮಗಾರಿ ಪರಿಶೀಲಿಸಿ ಮಾತನಾಡಿದರು. ಸಣ್ಣ ಪುಟ್ಟ ಕೆಲಸಗಳನ್ನು ಹೊರೆತುಪಡಿಸಿ ಭವನದ ಕಾಮಗಾರಿ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. ಎಲ್ಲರ ಸಹಕಾರದಿಂದ ಕೆಲಸವು ಉತ್ತಮವಾಗಿದೆ.

ಕಾಮಗಾರಿ ಮುಗಿದ ಬಳಿಕ ಕಾರ್ತಿಕ ಇಲ್ಲವೇ ಮಾರ್ಗಶಿರ ಮಾಸದಲ್ಲಿ ಭವನವನ್ನು ಉದ್ಘಾಟಿಸಲಾಗುವುದು. ಭವನ ಪೂರ್ಣಗೊಳ್ಳುವುದಕ್ಕೆ ಇನ್ನಷ್ಟು ಹಣದ ಅವಶ್ಯಕತೆ ಬೀಳಬಹುದು ಎಂದು ಸಮಿತಿಯವರು ತಿಳಿಸಿದ್ದು, ಸಚಿವ ಶಿವರಾಜ ತಂಗಡಗಿ ಅವರಿಗೆ ಅನುದಾನ ನೀಡುವಂತೆ ತಿಳಿಸಲಾಗುವುದು ಎಂದರು.

ನಂತರ ಸಮಿತಿಯವರು ತೋರಿಸಿದ ಕಟ್ಟಡ ಖರ್ಚು ವೆಚ್ಚವನ್ನು ಜಗದ್ಗುರುಗಳು ಪರಿಶೀಲಿಸಿದರು. ಪ್ರಮುಖರಾದ ಶೇಖರಗೌಡ ಪಾಟೀಲ್, ಕಳಕಪ್ಪ ಹಾದಿಮನಿ, ರುದ್ರಮುನಿಯಪ್ಪ ಪ್ರಭುಶೆಟ್ಟರ್, ಸಂಗಪ್ಪ ಸಜ್ಜನ್, ಶ್ರೀಶೈಲ ಪಾಟೀಲ್, ಬಸವರಾಜ ಸಜ್ಜನ್, ಸಂಗಯ್ಯಸ್ವಾಮಿ, ಶರಣಪ್ಪ ಸಜ್ಜನ್, ಗಂಗಾಧರ ಸಜ್ಜನ್, ಮೃತ್ಯುಂಜಯ ಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net