

ಕನಕಗಿರಿ: ಮಹರ್ಷಿ ವಾಲ್ಮೀಕಿ ಹಿಂದು ಸಮಾಜವೇ ಪೂಜಿಸುವ ರಾಮಾಯಣ ಮಹಾಕಾವ್ಯ ನೀಡಿದ್ದಾರೆ. ಅವರ ತತ್ವಾದರ್ಶಗಳು ಎಲ್ಲರಿಗೂ ಪ್ರೇರಣೆ ಎಂದು ಕುರುಡಿ ಆದಾಪುರದ ಶ್ರೀ ಶರಣಪ್ಪ ತಾತನವರು ಹೇಳಿದರು.
ತಾಲೂಕಿನ ಉಮಳಿ ಕಾಟಾಪುರದಲ್ಲಿ ವಾಲ್ಮೀಕಿ ಸಮುದಾಯದಿಂದ ಶನಿವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಾಲ್ಮೀಕಿ ರಚಿಸಿದ ರಾಮಾಯಣ 24,000 ಶ್ಲೋಕಗಳು ಮತ್ತು ಏಳು ಖಂಡಗಳನ್ನು ಒಳಗೊಂಡಿದೆ. ಬ್ರಿಟಿಷ್ ವಿಡಂಬನಕಾರ ರಾಮಾಯಣ ಬರೆದ ವಾಲ್ಮೀಕಿ ಅವರು ಸಾಹಿತ್ಯ ಪ್ರತಿಭೆ ಎಂದು ಕರೆದಿದ್ದರು. ಈ ಪೂಜಿತ ಗ್ರಂಥ ಹಲವು ಸಾಹಿತಿಗಳಿಗೆ ಸಾಹಿತ್ಯ ರಚನೆಗೆ ಪೂರಕವಾಗಿದೆ ಎಂದರು. ಜನಪದ ವಾದ್ಯಮೇಳದೊಂದಿಗೆ ಮಹರ್ಷಿ ವಾಲ್ಮೀಕಿ ಭಾವಚಿತ್ರ ಮೆರವಣಿಗೆ ಮಾಡಲಾಯಿತು. ನಂತರ ಅನ್ನಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.
ಸಮಾಜದ ಗುರುಗಳಾದ ರಾಜಾ ಅರವಿಂದ ನಾಯಕ, ಪ್ರಮುಖರಾದ ನಾಗರಾಜ ಇದ್ಲಾಪುರ, ಮಹಾಂತೇಶ ನಾಯಕ, ನಾಗರಾಜ ನವಲಿ, ಬಾರಿಮರದಪ್ಪ ನಡಲಮನಿ, ಕುಂಟೆಪ್ಪ ಕಟಗಿಹಳ್ಳಿ, ಬಾಲಪ್ಪ ನಾಡಿಗೇರ, ಯಂಕಣ್ಣ, ವಿರುಪಣ್ಣ ತಳವಾರ, ಹನುಮಂತ ಗಡೆದರ, ನಾಗರಾಜ ಬಸರಿಹಾಳ, ಹನುಮಂತ ಕಪಾಟ, ಆಂಜನೇಯ ಗಡದರ ಇತರರಿದ್ದರು.