ಮಳೆಯಿಂದ ವಾರದ ಸಂತೆಗೆ ಅಡಚಣೆ

knk-1
ಕನಕಗಿರಿಯಲ್ಲಿ ಸೋಮವಾರ ಸಂಜೆ ಕೆಲ ಕಾಲ ಸುರಿದ ಮಳೆಯಿಂದ ವ್ಯಾಪಾರಸ್ಥರು, ಗ್ರಾಹಕರು ಪರದಾಡಿದರು.
Published on

ಕನಕಗಿರಿ: ಪಟ್ಟಣದಲ್ಲಿ ಸೋಮವಾರ ಸಂಜೆ ಸುರಿದ ಮಳೆಯಿಂದ ವಾರದ ಸಂತೆಯಲ್ಲಿ ವ್ಯಾಪಾರಸ್ಥರಿಗೆ ಹಾಗೂ ಗ್ರಾಹಕರಿಗೆ ಅಡಚಣೆ ಆಯಿತು.

ಜಿಟಿಜಿಟಿಯಾಗಿ ಆರಂಭದ ಮಳೆ ಜೋರಾಗಿ ಬರುತ್ತಿದ್ದಂತೆಯೇ ಬಟ್ಟೆ, ಕಿರಾಣಿ, ಕಾಳು, ಒಣ ಮೆಣಸಿನಕಾಯಿ, ಮಿಠಾಯಿ, ಎಲೆಕ್ಟ್ರಿಕ್ ಅಂಗಡಿಗಳ ವ್ಯಾಪಾರಸ್ಥರು ಮಳೆಯಿಂದ ರಕ್ಷಿಸಿಕೊಳ್ಳಲು ತಾಡುಪಾಲುಗಳು, ಅಂಗಡಿ-ಮಳಿಗೆಗಳ ಮೊರೆ ಹೋದರು.

ತರಕಾರಿ ಖರೀದಿಸಲೆಂದು ಸಂತೆಗೆ ಆಗಮಿಸಿದ್ದ ಸ್ಥಳೀಯರು ಸೇರಿ ಸುತ್ತ್ತಲಿನ ಗ್ರಾಮಸ್ಥರು ಪರದಾಡಬೇಕಾಯಿತು. ಸಂತೆಗೆ ಬಂದಿದ್ದ ಹಲವರು ಮಳೆಯಿಂದ ರಕ್ಷಣೆ ಸಿಗದೇ ತೋಯಿಸಿಕೊಂಡು ಮನೆ ಕಡೆಗೆ ತೆರಳುವುದು ಸಾಮಾನ್ಯವಾಗಿತ್ತು. ವಿವಿಧ ವಸ್ತುಗಳು ಹಾಗೂ ತರಕಾರಿ ವ್ಯಾಪಾರಸ್ಥರು ಮಳೆಯಿಂದ ವ್ಯಾಪಾರವಾಗಲಿಲ್ಲವೆಂದು ಬೇಸರಗೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net