

ಕನಕಗಿರಿ: ತಿಂಗಳ ಕೊನೆಯ ದಿನಗಳಲ್ಲಿ ಅಪೂರ್ಣ ಕಡತಗಳು ತಾಪಂಗೆ ಸಲ್ಲಿಕೆಯಾಗುತಿದ್ದು, ಇದರಿಂದ ತಾಲೂಕಿನ 11 ಗ್ರಾಪಂಗಳ ಸ್ಥಳ ಪರಿಶೀಲನೆ ಮಾಡಲು ತೊಂದರೆಯಾಗುತ್ತಿದೆ. ಪ್ರತಿ ತಿಂಗಳು 10ನೇ ತಾರೀಖಿನೊಳಗೆ ಕಡತಗಳನ್ನು ಸಲ್ಲಿಸಬೇಕು ಎಂದು ತಾಪಂ ನರೇಗಾ ಎಡಿ ಶರಪೋನ್ನಿಸಾ ಬೇಗಂ ಪಿಡಿಒ ಹಾಗೂ ಸಿಬ್ಬಂದಿಗೆ ಸೂಚಿಸಿದರು.
ತಾಲೂಕಿನ ಚಿಕ್ಕಮಾದಿನಾಳ, ಬಸರಿಹಾಳ ಹಾಗೂ ಹುಲಿಹೈದರ ಗ್ರಾಪಂಗೆ ಗುರುವಾರ ಭೇಟಿ ನೀಡಿ ಮಾತನಾಡಿದರು. ಪ್ರತಿ ತಿಂಗಳು 10ನೇ ತಾರೀಖಿನೊಳಗೆ ಕಡತಗಳನ್ನು ಅಪ್ಡೇಟ್ ಮಾಡಲು ಪಿಡಿಒ ಹಾಗೂ ಜೆಇಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಅನುಷ್ಠಾನಗೊಂಡ ಸಿಸಿ ರಸ್ತೆ, ದನದ ಶೆಡ್ ಕಾಮಗಾರಿ ಪರಿಶೀಲನೆ ಮಾಡಿದರು.
ಚಿಕ್ಕಮಾದಿನಾಳ ಗ್ರಾಪಂ ಅಧ್ಯಕ್ಷೆ ಹನುಮವ್ವ ವಡ್ರಕಲ್, ಐಇಸಿ ಸಂಯೋಜಕ ಶಿವಕುಮಾರ ಕೆ, ತಾಂತ್ರಿಕ ಸಹಾಯಕರಾದ ಸೈಯದ್ ಪಾಷಾ, ಉದಯಕುಮಾರ, ಗ್ರಾಪಂ ಸಿಬ್ಬಂದಿ ಶಂಕರ್, ಪಾಮಣ್ಣ, ಮಹೇಶ, ಹನುಮೇಶ, ಮಾರುತಿ ಇತರರಿದ್ದರು.