ಆಷಾಢ ಶುದ್ಧ ಏಕಾದಶಿ ಆಚರಣೆ ಜೋರು

PANDU RANGA
ಆಷಾಢ ಶುದ್ಧ ಏಕಾದಶಿ ನಿಮಿತ್ತ ಕನಕಗಿರಿಯ ಪಾಂಡುರಂಗ ದೇವಸ್ಥಾನದಲ್ಲಿ ಶ್ರೀಸ್ವಾಮಿ ಮೂರ್ತಿಗೆ ತುಳಸಿ ಹಾಗೂ ಹೂವಿನಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು.
Published on

ಕನಕಗಿರಿ: ಪಂಢರಾಪುರದ ಶ್ರೀ ಪಾಂಡುರಂಗನ ಭಕ್ತರಿಗೆ ಪವಿತ್ರ ದಿನವಾದ ಆಷಾಢ ಶುದ್ಧ ಏಕಾದಶಿ ನಿಮಿತ್ತ ಇಲ್ಲಿನ ಕಲಕೇರಿ ರಸ್ತೆಯ ಶ್ರೀ ಪಾಂಡುರಂಗ ರುಕ್ಮಿಣಿ ದೇವಸ್ಥಾನದಲ್ಲಿ ಬುಧವಾರ ವಿಶೇಷ ಪೂಜೆ ನೆರವೇರಿತು.

ದೇವಸ್ಥಾನದಲ್ಲಿ ಬೆಳಗ್ಗೆ ಪಾಂಡುರಂಗ ಹಾಗೂ ರುಕ್ಮಿಣಿ ದೇವರ ಮೂರ್ತಿಗೆ ತುಳಸಿ ಹಾಗೂ ಹೂವಿನ ಹಾರದಿಂದ ಅಲಂಕರಿಸಲಾಗಿತ್ತು. ನಂತರ ಕಾಕಡಾರತಿ, ಪಂಚಾಮೃತ ಅಭಿಷೇಕ, ತುಳಸಿ, ಪುಷ್ಪಾರ್ಚನೆ ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ಜರುಗಿದವು. ಭಕ್ತರು ಪಾಂಡುರಂಗ-ರುಕ್ಮಿಣಿ ಕೀರ್ತನೆಗಳನ್ನು ಹಾಡಿ ಭಕ್ತಿ ಸಮರ್ಪಿಸಿದರು. ಹಲವು ಭಕ್ತರು ಉಪವಾಸವಿದ್ದು ಆಷಾಢ ಏಕಾದಶಿ ಆಚರಿಸಿದರು.

ಅನಂತಪ್ಪ ಧಾಯಪುಲ್ಲೆ, ಪುಂಡಲೀಕಪ್ಪ ಧಾಯಪುಲ್ಲೆ, ರಮೇಶ ಅಚ್ಚಲಕರ, ಪಾಂಡುರಂಗ ಜನಾದ್ರಿ, ಮೋಹನ ಅಚ್ಚಲಕರ, ಶಶಿಕುಮಾರ ಬೊಂದಾಡೆ, ಗುರುರಾಜ, ಶಿವಕುಮಾರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net