ಯೂರಿಯಾ ಗೊಬ್ಬರಕ್ಕೆ ಹೆಚ್ಚಿದ ಬೇಡಿಕೆ

23knk2
Published on

ಕನಕಗಿರಿ: ನಿರಂತರ ಮಳೆ ಸುರಿಯುತ್ತಿರುವುದರಿಂದ ಬೆಳೆಗಳಿಗೆ ಗೊಬ್ಬರ ಪೂರೈಕೆಯ ಅಗತ್ಯವಿದ್ದು, ಯೂರಿಯಾ ಗೊಬ್ಬರಕ್ಕೆ ಬೇಡಿಕೆ ಹೆಚ್ಚಾಗಿ ರಸಗೊಬ್ಬರ ಖರೀದಿಸಲು ಪಟ್ಟಣದ ಮಳಿಗೆಗಗಳ ಮುಂದೆ ರೈತರು ಬುಧವಾರ ಮುಗಿಬಿದ್ದರು.

ಪಟ್ಟಣದ ನಮ್ಮ ಗ್ರೋಮರ್‌ನಲ್ಲಿ 14.85 ಟನ್ ಹಾಗೂ ತಾಲೂಕಿನ ಹುಲಿಹೈದರ್ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ 19.80 ಟನ್ ಯೂರಿಯಾ ಗೊಬ್ಬರ ಸಂಗ್ರಹವಿದೆ. ರಸಗೊಬ್ಬರ ಅಂಗಡಿ ಬಳಿ ಪೊಲೀಸರನ್ನು ನಿಯೋಜಿಸಲಾಗಿದೆ.

ಪಟ್ಟಣದ ನಮ್ಮ ಗ್ರೋಮರ್ ಮುಂದೆ ಬೆಳ್ಳಂಬೆಳಗ್ಗೆಯೇ ಯೂರಿಯಾ ಗೊಬ್ಬರ ಖರೀದಿಸಲು ಪಟ್ಟಣ ಸೇರಿ ಸುತ್ತ್ತಲಿನ ಗ್ರಾಮಗಳ ರೈತರು ಕಾದು ಕುಳಿತಿದ್ದರು. ಪ್ರತಿ ರೈತನ ಆಧಾರ್ ಕಾರ್ಡ್‌ಗೆ 45 ಕೆಜಿ ತೂಕದ ಮೂರು ಚೀಲ ಯೂರಿಯಾ ಗೊಬ್ಬರ ನೀಡಲಾಗುತ್ತಿದ್ದು, ಚೀಲಕ್ಕೆ 267 ರೂ. ದರ ಇದೆ. ಆದರೆ, ಯೂರಿಯಾ ಜತೆಗೆ ನ್ಯಾನೋ ಯೂರಿಯಾ ಇಲ್ಲವೇ ಡಿಎಪಿ ಕಡ್ಡಾಯವಾಗಿ ನೀಡುತ್ತಿರುವುದು ರೈತರಿಗೆ ಹೊರೆಯಾಗುತ್ತಿದೆ. ಯೂರಿಯಾ ಗೊಬ್ಬರದ ದರಕ್ಕಿಂತ ಈ ನ್ಯಾನೋಗಳ ದರವೇ ದುಪ್ಪಟ್ಟಾಗಿದ್ದು, ಅನಿವಾರ್ಯವಾಗಿ ಖರೀದಿಸುತ್ತಿದ್ದಾರೆ.

((ಕೋಟ್))

ಯೂರಿಯಾ ಜತೆಗೆ ಇತರೆ ಸಂಯುಕ್ತ ಗೊಬ್ಬರಗಳನ್ನು ಸಿಂಪಡಣೆ ಮಾಡುವುದರಿಂದ ಕಾಳು ಗಟ್ಟಿಯಾಗುತ್ತವೆ. ಉತ್ತಮ ಫಸಲು ಪಡೆಯಬಹುದು. ಗೊಬ್ಬರ ಕಂಪನಿಗಳು ಯೂರಿಯಾ ಜತೆಗೆ ಇತರೆ ಗೊಬ್ಬರಗಳನ್ನು ನೀಡುತ್ತವೆ. ರೈತರಿಗೆ ನ್ಯಾನೋ ಕಡ್ಡಾಯವಲ್ಲ. ಆದರೆ, ಅಂಗಡಿಯವರು ರೈತರಿಗೆ ಮನವೊಲಿಸಿ ಮಾರಾಟ ಮಾಡಬೇಕು.

ಸಂತೋಷ ಪಟ್ಟದಕಲ್

ಎಡಿ ಕೃಷಿ ಇಲಾಖೆ, ಗಂಗಾವತಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net