

ಕನಕಗಿರಿ: ಹಳೆಯ ಪಿಂಚಣಿ(ಒಪಿಎಸ್)ಯನ್ನು ಜಾರಿಗೆ ತರಬೇಕೆಂದು ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರ ಸಂಘದ ಸದಸ್ಯರು ಸಿಎಂ ಸಿದ್ದರಾಮಯ್ಯರಿಗೆ ಪತ್ರ ಬರೆದು ಅಂಚೆ ಮಾಡುವ ಮೂಲಕ ಬುಧವಾರ ಪತ್ರ ಚಳವಳಿ ನಡೆಸಿದರು.
ಚುನಾವಣಾ ಪೂರ್ವದಲ್ಲಿ ಸಿಎಂ ಸಿದ್ದರಾಮಯ್ಯ ಅವರು 6ನೇ ಗ್ಯಾರಂಟಿಯಾಗಿ 2006ರ ನಂತರದಲ್ಲಿ ರಾಜ್ಯ ಸರ್ಕಾರಿ ನೌಕರರಾಗಿ ಆಯ್ಕೆಯಾಗಿ ಸೇವೆ ಸಲ್ಲಿಸುತ್ತಿರುವವರಿಗೆ ಎನ್‌ಪಿಎಸ್ ಬದಲಾಗಿ ಒಪಿಎಸ್ ಜಾರಿ ಮಾಡುವ ಭರವಸೆ ನೀಡಿದ್ದರು. ಅದರಂತೆ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ರಾಜ್ಯದ ಸಿಎಂ ಆಗಿದ್ದಾರೆ. ಇದರಿಂದ ಸಿಎಂ ಸಿದ್ದರಾಮಯ್ಯ ಎನ್‌ಪಿಎಸ್ ರಾಜ್ಯ ಸರ್ಕಾರಿ ನೌಕರರ ಬಹುದಿನದ ಬೇಡಿಕೆಯಾದ ಒಪಿಎಸ್ ಜಾರಿಗೊಳಿಸಬೇಕು. ಭವಿಷ್ಯದ ನಿವೃತ್ತಿಯ ಜೀವನ ಸದೃಢಗೊಳಿಸಲು ಆಗ್ರಹಿಸಿ ತಾಲೂಕಿನಾದ್ಯಂತ ಇರುವ ರಾಜ್ಯ ಸರ್ಕಾರಿ ನೌಕರರು ಅಂಚೆ ಪತ್ರದ ಚಳುವಳಿ ಮೂಲಕ ಮುಖ್ಯಮಂತ್ರಿಗಳಿಗೆ ಆಗ್ರಹಿಸುತ್ತಿದ್ದೇವೆ ಎಂದು ನೌಕರರು ತಿಳಿಸಿದರು.
ಶಾಲಾ-ಕಾಲೇಜು, ಇತರೇ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಲೇ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಅಂಚೆಪೆಟ್ಟಿಗೆಗೆ ಹಾಕಿದರು. ಶಿಕ್ಷಕರಾದ ರವಿ ಸಜ್ಜನ್, ವೆಂಕೋಬ ಪೂಜಾರ್, ರಂಗಾರೆಡ್ಡಿ ಪ್ರಮುಖರಾದ ಸಂತೋಷ, ಮಲ್ಲೇಶಪ್ಪ, ಮುರ್ತುಜಾ, ಡಾ.ಪವನ್ ಇತರರಿದ್ದರು.