

ಕನಕಗಿರಿ: ಆಪರೇಷನ್ ಸಿಂಧೂರ ಯಶಸ್ವಿಯಾದ ಹಿನ್ನೆಲೆಯಲ್ಲಿ ಇಲ್ಲಿನ ಐತಿಹಾಸಿಕ ಶ್ರೀ ಕನಕಾಚಲ ದೇವಸ್ಥಾನದಲ್ಲಿ ಗುರುವಾರ ದೇವಸ್ಥಾನ ಸಮಿತಿಯಿಂದ ಸಂಕಲ್ಪ ಪೂಜೆ ನೆರವೇರಿಸಲಾಯಿತು.
ದೇವಸ್ಥಾನದಲ್ಲಿ ಭಾರತದ ಧ್ವಜವನ್ನು ಹಿಡಿದ ವ್ಯವಸ್ಥಾಪನಾ ಸಮಿತಿ ಸದಸ್ಯರು, ದೇಶದ ಸೈನ್ಯಕ್ಕೆ ಜೈಕಾರ ಹಾಕಿದರು. ಸಂಕಲ್ಪ ಪೂಜೆ ಮಾಡಿ ದೇವರಲ್ಲಿ ಭಾರತೀಯ ಸೇನೆಗೆ ಒಳಿತು ಬಯಸಿದರು. ಸೈನಿಕರಿಗೆ ಭಯೋತ್ವಾದನೆ ನಿಗ್ರಹಿಸುವ ಶಕ್ತಿ ತುಂಬುವಂತೆ ಬೇಡಿಕೊಂಡರು.
ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಾಗರಾಜ ತೆಗ್ಗಿಹಾಳ, ಸದಸ್ಯರಾದ ಕೀರ್ತಿಸೋನಿ, ವೆಂಕಟೇಶ ಸೌದ್ರಿ, ವೀರೇಶ ತೆಗ್ಗಿನಮನಿ, ಕಾರ್ಯದರ್ಶಿ ಸಿದ್ದಲಿಂಗಯ್ಯಸ್ವಾಮಿ, ಪ್ರಮುಖ ಕನಕರೆಡ್ಡಿ ಇತರರಿದ್ದರು.