ನೆಟ್‌ವರ್ಕ್ ಸಿಗದೆ ಮನೆ ಮಾಳಿಗೆ ಹತ್ತಿದ ಗಣಿತದಾರರು

NETWORK PROBLEM
ಕನಕಗಿರಿ ತಾಲೂಕಿನ ಕೆ.ಕಾಟಾಪುರದಲ್ಲಿ ಗಣತಿದಾರರು ಮನೆ ಮಾಳಿಗೆ ಮೇಲೆ ಗಣತಿ ಕಾರ್ಯ ಮಾಡುತ್ತಿರುವುದು. ತಹಸೀಲ್ದಾರ್ ವಿಶ್ವನಾಥ ಮುರುಡಿ ಇದ್ದರು.
Published on

ಕನಕಗಿರಿ: ತಾಲೂಕಿನಾದ್ಯಂತ ಜಾತಿ ಗಣತಿ ಕಾರ್ಯ ಉತ್ತಮವಾಗಿ ಸಾಗಿದೆಯಾದರೂ ಕೆಲ ಗ್ರಾಮಗಳಲ್ಲಿ ನೆಟ್‌ವರ್ಕ್ ಸಮಸ್ಯೆಯಿಂದ ಶಿಕ್ಷಕರು ಮನೆಯ ಮಾಳಿಗೆ ಏರಿ ಸಮೀಕ್ಷೆ ಮಾಡುತ್ತಿರುವುದು ಗುರುವಾರ ಕೆ.ಕಾಟಾಪುರದಲ್ಲಿ ಕಂಡು ಬಂದಿದೆ.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ನಾಗಮಣಿ, ತಹಸೀಲ್ದಾರ್ ವಿಶ್ವನಾಥ ಮುರುಡಿ ತಾಲೂಕಿನ ಕೆ. ಕಾಟಾಪುರಕ್ಕೆ ಭೇಟಿ ನೀಡಿದ್ದು, ಅದೇ ಗ್ರಾಮದಲ್ಲಿ ನೆಟ್‌ವರ್ಕ್ ಸಮಸ್ಯೆಯಾಗಿದ್ದರಿಂದ ಗಣತಿದಾರರು ಮನೆ ಮಾಳಿಗೆ ಮೇಲೆ ನಿಂತು ಗಣತಿ ಕಾರ್ಯ ಮಾಡುವುದನ್ನು ಖುದ್ದು ವೀಕ್ಷಿಸಿದ್ದಾರೆ. ಇದರಿಂದ ಆಗುತ್ತಿರುವ ಸಮಸ್ಯೆಯನ್ನು ಗಣತಿದಾರರಿಂದ ಪಡೆದುಕೊಂಡಿದ್ದಾರೆ. ಇನ್ನು ದೇವಲಾಪುರ ಗ್ರಾಮದಲ್ಲಿ ನೆಟ್‌ವರ್ಕ್ ಸಮಸ್ಯೆಯಿರುವುದನ್ನು ತಿಳಿದುಕೊಂಡಿದ್ದಾರೆ.

ದೇವಲಾಪುರ ಗ್ರಾಮದ ಸಮಸ್ಯೆಯ ಬಗ್ಗೆ ಈಗಾಗಲೇ ಮೇಲಧಿಕಾರಿಗಳಿಗೆ ತಹಸೀಲ್ದಾರ್ ವಿಶ್ವನಾಥ ಮುರುಡಿ ಪತ್ರ ಬರೆದಿದ್ದು, ಹಿರೇಖೇಡ ಹಾಗೂ ಕೆ.ಕಾಟಾಪುರ ಗ್ರಾಮದ ಸಮಸ್ಯೆ ಬಗೆಹರಿಸಲು ಬಿಸಿಎಂ ಜಿಲ್ಲಾ ಅಧಿಕಾರಿಗಳು ಆ ಎರಡು ಗ್ರಾಮಗಳಿಗೆ ವಿಶೇಷ ಶಿಬಿರ ಏರ್ಪಡಿಸಲು ಮನವಿ ಮಾಡಲಾಗುವುದು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net