

ಕನಕಗಿರಿ: ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಣ ಹಾಗೂ ಮೂಲ ಸಂಸ್ಕೃತಿಯ ಪಾತ್ರ ಬಹುಮುಖ್ಯ ಎಂದು ಗಂಗಾವತಿ ಕೃಷಿ ಇಲಾಖೆ ಅಧಿಕಾರಿ ಪ್ರಕಾಶ ರಾಠೋಡ್ ಹೇಳಿದರು.
ತಾಲೂಕಿನ ನವಲಿತಾಂಡಾದಲ್ಲಿ ಮಂಗಳವಾರ ದುರ್ಗಾ ಮಾತಾ ಯುವಕ ಸಂಘ ಹಮ್ಮಿಕೊಂಡಿದ್ದ 8ನೇ ವರ್ಷದ ಪ್ರತಿಭಾ ಪುರಸ್ಕಾರ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬಂಜಾರ ಸಮುದಾಯ ಭಾರತದಲ್ಲೇ ಶ್ರೇಷ್ಠ ಸಾಂಪ್ರದಾಯಿಕ ಉಡುಗೆ ತೊಡುಗೆಗಳನ್ನು ಹೊಂದಿದೆ. ಶ್ರೀಮಂತಿಕೆಯ ಸಂಸ್ಕೃತಿಯನ್ನು ತನ್ನ ಒಡಲಿನಲ್ಲಿ ತುಂಬಿಕೊಂಡಿದೆ. ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಮುದಾದವರು ಬೆಳೆವಣಿಗೆ ಕಾಣುತ್ತಿರುವುದು ಸಂತಸದ ಸಂಗತಿ ಎಂದರು.
ಸರ್ಕಾರಿ ನೌಕರಿ ಪಡೆದ ವಿನೋದ ಕೇಶ್ಯಾ ನಾಯಕ್, ಕೃಷ್ಣನಾಯ್ಕ, ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಸಾಧನೆ ಮಾಡಿದ ತಾಂಡಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಶಾಲಾ ಮಕ್ಕಳು ಹಾಗೂ ಯುವಕರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ನಾಗುಬಾಯಿ ನಾಯ್ಕ, ಸಹಾಯಕ ಇಂಜಿನಿಯರ್ ಅನಿಲ್ ಕುಮಾರ್ ನಾಯ್ಕ, ಗ್ರಾಪಂ ಸದಸ್ಯರಾದ ಪಾಂಡಪ್ಪ, ಶಂಕರ್ ನಾಯ್ಕ, ಗಂಗಪ್ಪ, ಉಮೇಶ, ಮಾಜಿ ಸದಸ್ಯರಾದ ರಾಮ ನಾಯ್ಕ, ಪಂಪಣ್ಣ, ದುರ್ಗಪ್ಪ, ಇಂಜಿನಿಯರ್‌ಗಳಾದ ಆನಂದ ನಾಯ್ಕ, ರಾಮು, ಶೆಟ್ಟಪ್ಪ, ಉಪನ್ಯಾಸಕ ವಿಷ್ಣುನಾಯ್ಕ ನಿರೂಪಿಸಿದರು.