

ಕನಕಗಿರಿ: ಅಂಗನವಾಡಿ ಕೇಂದ್ರಗಳು ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಸಹಕಾರಿ ಎಂದು ಕನಕಗಿರಿ ಯೋಜನೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಿರೂಪಾಕ್ಷಿ ಹೇಳಿದರು.
ತಾಲೂಕಿನ ನವಲಿ ಗ್ರಾಮದ ಜಡೇಸಿದ್ಧೇಶ್ವರ ದೇವಸ್ಥಾನ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕಲಿಕಾ ಟ್ರಸ್ಟ್ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬಾಲ ಮೇಳ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಂಗನವಾಡಿಯಲ್ಲಿ ಪ್ರತಿನಿತ್ಯ ಶಾಲಾ ಪೂರ್ವ ಶಿಕ್ಷಣ ವೇಳಾಪಟ್ಟಿಗನುಗುಣವಾಗಿ ಚಟುವಟಿಕೆ ನಡೆಸಲಾಗುತ್ತಿದೆ. ಇದರಿಂದ ಮಕ್ಕಳ ಬೌದ್ಧಿಕ ಹಾಗೂ ಕಲಿಕೆಯಲ್ಲೂ ಬದಲಾವಣೆಯಾಗಲಿದೆ ಎಂದರು.
ಮಕ್ಕಳು ಶಾಲಾ ಪೂರ್ವ ಶಿಕ್ಷಣದ ನೃತ್ಯ, ಏಕಪಾತ್ರಾಭಿನಯ ಸೇರಿ ನಾನಾ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಿಕೊಟ್ಟರು. ಗ್ರಾಪಂ ಅಧ್ಯಕ್ಷೆ ಮಹಾದೇವಮ್ಮ, ಉಪಾಧ್ಯಕ್ಷ ನಾಗರಾಜ, ಮೇಲ್ವಿಚಾರಕಿ ಶ್ರೀದೇವಿ ಎಣ್ಣೆ, ಪಿಡಿಒ ವೀರಣ್ಣ ನಕ್ರಳ್ಳಿ, ಕಾರ್ಯಕರ್ತೆಯರಾದ ಶಾಂತಮ್ಮ, ವಿಜಯಲಕ್ಷ್ಮೀ, ಶಶಿಕಲಾ, ಅನಿತಾ, ಗಂಗಮ್ಮ, ಶೇಖರಮ್ಮ, ಈರಮ್ಮ, ದುರ್ಗಮ್ಮ, ಹನುಮಮ್ಮ, ತಾರಾಬಾಯಿ, ರೇಣುಕಾ, ರತ್ನಮ್ಮ, ಜಂಬಮ್ಮ ಇತರರಿದ್ದರು.