ಭೋಗಾಪುರೇಶ್ವರಗೆ ಬೆಣ್ಣೆ ಅಲಂಕಾರ

KNK-1
ಕನಕಗಿರಿ ತಾಲೂಕಿನ ನವಲಿಯಲ್ಲಿ ಪೂರ್ವಾರಾಧನೆ ನಿಮಿತ್ತ ಗುರುರಾಯರ ಭಾವಚಿತ್ರ ಮೆರವಣಿಗೆ ಮಾಡಲಾಯಿತು. ಪ್ರಮುಖರಾದ ತೊಂಡೆಪ್ಪ ಕುಂಡೇರ, ಖಲೀಲ, ಸುರೇಶರೆಡ್ಡಿ ಮಹಲಿನಮನಿ, ಪಂಪಾಪತಿ ತುಪ್ಪದ್, ಭೀಮರೆಡ್ಡಿ ಓಣಿಮನಿ, ವಿನಯ್ ಪತ್ತಾರ, ಭೀಮರಾವ್ ಇತರರಿದ್ದರು.
Published on

ಕನಕಗಿರಿ: ರಾಯರ 354ನೇ ಪೂರ್ವಾರಾಧನೆ ನಿಮಿತ್ತ ತಾಲೂಕಿನ ನವಲಿಯ ಐತಿಹಾಸಿಕ ಶ್ರೀ ಭೋಗಾಪುರೇಶ ದೇವಸ್ಥಾನದಲ್ಲಿ ಭಾನುವಾರ ಬೆಣ್ಣೆ ಅಲಂಕಾರ ಮಾಡಲಾಗಿತ್ತು.

ಭಜನೆಯೊಂದಿಗೆ ರಾಯರ ಭಾವಚಿತ್ರ ಮೆರವಣಿಗೆ ಮಾಡಲಾಯಿತು. ರಾಯರ ಅಕ್ಷರ ಮಾಲಿಕೆಯ ಕುರಿತು ಶ್ರೀಪಾದ ಕುಲಕರ್ಣಿ ಉಪನ್ಯಾಸ ನೀಡಿದರು. ಕನಕಗಿರಿಯ ಪ್ರತಾಪರಾಯ ಮಂಡಳಿಯಿಂದ ಭಜನಾ ಕಾರ್ಯಕ್ರಮ ನೆರವೇರಿತು.

ಶ್ರೀನಾಥಾಚಾರ್ ಪೂಜಾರ್ ಅವರು ಶ್ರೀರಾಮ ಷಡಕ್ಷರಿ ಮಂತ್ರ-ಹೋಮ ನೆರವೇರಿಸಿದರು. ಸೇವಾಕರ್ತರಾದ ವಾದಿರಾಜ ದಿಗ್ಗಾವಿ, ಮಧು ಗುಡೂರು, ಗುರುರಾಜ ಸೌದಿ, ಶ್ರೀನಿವಾಸಾಚಾರ್ ಪೂಜಾರ, ಮುರಳೀಧರಾಚಾರ್, ರಘು ಗುಡೂರು, ಸುದರ್ಶನ್ ಕುಲಕರ್ಣಿ, ವಿಜಯ ಗಂಡೂರು, ಪ್ರದೀಪ್ ಸೌದಿ, ಪವನ್ ಸೌದಿ, ರಾಘು ನವಲಿ, ಲಕ್ಷ್ಮಣ ಬೆಳ್ಳುಬ್ಬಿ, ಕಲಾವಿದರಾದ ತೊಂಡೆಪ್ಪ ಕುಂಡೇರ, ಖಲೀಲ, ಸುರೇಶರೆಡ್ಡಿ ಮಹಲಿನಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net