ಜ್ಞಾನ ವಿಸ್ತರಿಕೊಳ್ಳಲು ಉಪಯುಕ್ತ

Kanakagiri national librarians day
ಕನಕಗಿರಿಯ ತಾಪಂನಲ್ಲಿ ಗ್ರಂಥಪಾಲಕರ ದಿನಾಚರಣೆಯಲ್ಲಿ ಗ್ರಂಥಾಲಯ ಪಿತಾಮಹ ಡಾ.ಎಸ್.ಆರ್. ರಂಗನಾಥನ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಇಒ ರಾಜಶೇಖರ್, ಯೋಜನಾಧಿಕಾರಿ ಡಾ.ಹುಲುಗಪ್ಪ, ವಿಷಯ ನಿರ್ವಾಹಕರಾದ ಕೊಟ್ರಯ್ಯಸ್ವಾಮಿ, ಕೆ.ಪವನಕುಮಾರ್ ಇತರರಿದ್ದರು.
Published on

ಕನಕಗಿರಿ: ಜ್ಞಾನ ಸಾಗರವಾದ ಗ್ರಂಥಾಲಯದ ಸದುಪಯೋಗವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು ಎಂದು ತಾಪಂ ಇಒ ರಾಜಶೇಖರ್ ಹೇಳಿದರು.

ಇಲ್ಲಿನ ತಾಲೂಕು ಪಂಚಾಯಿತಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆಯಲ್ಲಿ ಗ್ರಂಥಾಲಯ ಪಿತಾಮಹ ಡಾ.ಎಸ್.ಆರ್. ರಂಗನಾಥನ್ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಮಾತನಾಡಿದರು.

ವ್ಯಕ್ತಿಯ ಜ್ಞಾನವನ್ನು ವಿಸ್ತರಿಸಲು ಗ್ರಂಥಾಲಯ ಉಪಯುಕ್ತ ಮಾಧ್ಯಮವಾಗಿದೆ. ಹೆಚ್ಚಿನ ವರ್ಗದ ವ್ಯಕ್ತಿಗಳಿಗೆ ಆಸಕ್ತಿ ಅಥವಾ ಅಗತ್ಯವಿರುವ ಎಲ್ಲ ಪುಸ್ತಕಗಳನ್ನು ಖರೀದಿಸಿ ಓದಲು ಕಷ್ಟವಾಗುತ್ತದೆ. ಹಣದ ಅನುಪಸ್ಥಿತಿಯಲ್ಲಿ ಅವನು ಜ್ಞಾನ ಮತ್ತು ಶಿಕ್ಷಣದಿಂದ ವಂಚಿತನಾಗಿರುತ್ತಾನೆ. ಅಂಥವರು ಗ್ರಂಥಾಲಯದ ಮೂಲಕ ಎಲ್ಲ ರೀತಿಯ ಪುಸ್ತಕಗಳನ್ನು ಓದಿ ಜ್ಞಾನ ಸಂಪಾದಿಸಬಹುದು ಎಂದರು.

ತಾಲೂಕಿನ ಎಲ್ಲ ಗ್ರಾಪಂ ಗ್ರಂಥಾಲಯಗಳಲ್ಲಿರುವ ಗ್ರಂಥಪಾಲಕರು ಗ್ರಂಥಾಲಯವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಜತೆಗೆ ಮಕ್ಕಳಿಗೆ ಓದುವ ವಾತಾವರಣ ನಿರ್ಮಾಣ ಮಾಡಬೇಕು ಎಂದು ತಿಳಿಸಿದರು. ಮುಸಲಾಪುರ ಗ್ರಾಪಂ ಗ್ರಂಥಾಲಯದ ಗ್ರಂಥಪಾಲಕ ಶೇಖರಗೌಡ, ಸುಳೇಕಲ್ ಗ್ರಾಪಂ ಗ್ರಂಥಪಾಲಕಿ ಪ್ರಭಾವತಿ ಇವರನ್ನು ಗೌರವಿಸಲಾಯಿತು. ತಾಪಂ ಯೋಜನಾಧಿಕಾರಿ ಡಾ.ಹುಲುಗಪ್ಪ, ವಿಷಯ ನಿರ್ವಾಹಕರಾದ ಕೊಟ್ರಯ್ಯಸ್ವಾಮಿ, ಕೆ.ಪವನಕುಮಾರ್ ಸೇರಿ 11 ಗ್ರಾಪಂ ಗ್ರಂಥಾಲಯಗಳ ಗ್ರಂಥಪಾಲಕರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net