

ಕನಕಗಿರಿ: ಇಲ್ಲಿನ 4ನೇ ವಾರ್ಡ್ ವ್ಯಾಪ್ತಿಯ ಕಲಕೇರಾ ರಸ್ತೆಯಲ್ಲಿರುವ ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದ ಕೊಳಚೆ ನೀರು ನೂತನ ನಾಡ ಕಚೇರಿ ಸುತ್ತ ಹಾಗೂ ರಸ್ತೆ ಮೇಲೆ ಹರಿಯುತ್ತಿದ್ದು, ಸಾರ್ವಜನಿಕರ ಓಡಾಟಕ್ಕೆ ಸಮಸ್ಯೆಯಾಗಿದೆ.
ವಸತಿ ನಿಲಯಕ್ಕೆ ನೀರು ಸಂಗ್ರಹಿಸಲು ಕಟ್ಟಡದ ಮೇಲೆ ಅಳವಡಿಸಿರುವ ಸಿಂಟೆಕ್ಸ್ ತುಂಬಿ ಹೆಚ್ಚುವರಿ ನೀರು ಹರಿಯಲು ವ್ಯವಸ್ಥೆ ಇಲ್ಲ. ಹೀಗಾಗಿ ಆ ನೀರು ಇತ್ತೀಚೆಗೆ ಉದ್ಘಾಟನೆಗೊಂಡಿರುವ ನಾಡ ಕಚೇರಿ ಕಟ್ಟಡದ ಸುತ್ತಲೂ ನಿಂತರೆ, ಇನ್ನು ಸ್ನಾನಗೃಹದ ಗುಂಡಿಗಳು ತುಂಬಿ ಕೊಳಚೆ ನೀರು ಹೊರಗೆ ಬಂದು ರಸ್ತೆಯಲ್ಲಿ ಹರಿಯುತ್ತಿದೆ. ಇದರಿಂದ ನಾಡ ಕಚೇರಿಯ ಮುಂಭಾಗ ಕೊಳಚೆ ಪ್ರದೇಶವಾಗಿ ನಿರ್ಮಾಣವಾಗಿದೆ. ಇದರಿಂದ ವಸತಿ ನಿಲಯ ಸೇರಿದಂತೆ ಜಮೀನುಗಳಿಗೆ ತೆರಳಲು ತೊಂದರೆ ಅನುಭವಿಸಬೇಕಾಗಿದೆ. ಹಾಸ್ಟೆಲ್ ನಿರ್ಮಾಣ ಕಾಮಗಾರಿ ಪೂರ್ಣ ಪ್ರಮಾಣದಲ್ಲಿ ಗುತ್ತಿಗೆದಾರರು ನಿರ್ವಹಿಸದಿರುವುದು ಹಾಗೂ ತರಾತುರಿಯಲ್ಲಿ ಕಟ್ಟಡವನ್ನು ಅಧಿಕಾರಿಗಳು ಹಸ್ತಾಂತರ ಮಾಡಿಕೊಂಡಿರುವುದೇ ಸಮಸ್ಯೆಗೆ ಕಾರಣ ಎನ್ನಲಾಗಿದೆ.
((ಕೋಟ್))ಈ ಬಗ್ಗೆ ವಸತಿ ನಿಲಯದ ವಾರ್ಡನ್‌ನಿಂದ ಮಾಹಿತಿ ಪಡೆಯಲಾಗುವುದು. ಪ್ಲಂಬರ್‌ರನ್ನು ಕಳುಹಿಸಿ ಕೊಳಚೆ ನೀರು ರಸ್ತೆ ಮೇಲೆ ಹರಿಯದಂತೆ ಕ್ರಮ ಕೈಗೊಳ್ಳಲಾಗುವುದು.ಉಷಾ ಮಜುಂದಾರ್ತಾಲೂಕು ವಿಸ್ತರಣಾಧಿಕಾರಿ, ಬಿಸಿಎಂ ಇಲಾಖೆ, ಗಂಗಾವತಿ