

ಕನಕಗಿರಿ: ಮಾಸಿಕ ಸಂತೆ ಆಯೋಜನೆಯಿಂದ ಮಹಿಳೆಯರು ತಯಾರಿಸಿದ ಉತ್ಪನ್ನಗಳಿಗೆ ವೇದಿಕೆ ಕಲ್ಪಿಸುವ ಜತೆಗೆ ಆದಾಯ ಹೆಚ್ಚಿಸಿದಂತಾಗಿದೆ ಎಂದು ತಾ.ಪಂ ಇಒ ಕೆ.ರಾಜಶೇಖರ್ ಹೇಳಿದರು.
ಪಟ್ಟಣದ ವಾರದ ಸಂತೆ ಮೈದಾನದಲ್ಲಿ ತಾಪಂ ಎನ್.ಆರ್.ಎಲ್.ಎಂ ಸಂಜೀವಿನಿ ಯೋಜನೆಯಡಿ ಸೋಮವಾರ ಆಯೋಜಿಸಿದ್ದ ಸಂಜೀವಿನಿ ಮಾಸಿಕ ಸಂತೆಯಲ್ಲಿ ಮಾತನಾಡಿದರು. ಪ್ರತಿ ತಿಂಗಳು ಮಾಸಿಕ ಸಂತೆ ಆಯೋಜನೆಯಿಂದ ಸ್ವಸಹಾಯ ಸಂಘದ ಮಹಿಳೆಯರಿಗೆ ಅನುಕೂಲವಾಗಿದೆ ಎಂದರು.
ಮಾಸಿಕ ಸಂತೆಯಲ್ಲಿ ಮಹಿಳೆಯರೇ ತಯಾರಿಸಿದ ಸಿಹಿ ತಿನಿಸು, ಬಟ್ಟೆ ವ್ಯಾಪಾರ, ಬಳೆ ವ್ಯಾಪಾರ, ತೊಗರಿ ಬೆಳೆ, ಖಾರದ ಪುಡಿ, ಕಸೂತಿ ಸೇರಿ ಕರಕುಶಲ ವಸ್ತುಗಳು ಲಭ್ಯವಿದ್ದವು.
ಸಿಡಿಪಿಒ ವಿರುಪಾಕ್ಷಿ, ತಾಲೂಕು ಎನ್.ಆರ್.ಎಲ್.ಎಂ ಸಂಯೋಜಕಿ ರೇಣುಕಾ, ತಾ.ಪಂ ವಿಷಯ ನಿರ್ವಾಹಕ ಯಂಕೋಬ, ಪವನ್, ಕಂಪ್ಯೂಟರ್ ಆಪರೇಟರ್ ಹುಲಿಗೇಶ್ ಸೇರಿ ಬಿ.ಆರ್.ಪಿ.ಇ.ಪಿ, ಸ್ವಸಹಾಯ ಸಂಘ ಮಹಿಳೆಯರು, ಎಂಬಿಕೆ, ಎಲ್.ಸಿ.ಆರ್.ಪಿ, ಕೃಷಿ-ಪಶು ಸಖಿಯರು ಹಾಜರಿದ್ದರು.