ಮಾಸಿಕ ಸಂತೆಯಿಂದ ಆದಾಯ ಹೆಚ್ಚಳ

background (15)
ಕನಕಗಿರಿಯ ಕನಕಾಚಲ ದೇವಸ್ಥಾನದ ಪಕ್ಕದಲ್ಲಿ ಎನ್.ಆರ್.ಎಲ್.ಎಂ. ಸಂಜೀವಿನಿ ಯೋಜನೆಯಡಿ ಆಯೋಜಿಸಿದ್ದ ಸಂಜೀವಿನಿ ಮಾಸಿಕ ಸಂತೆಯನ್ನು ತಾಪಂ ಇಒ ರಾಜಶೇಖರ್ ವೀಕ್ಷಿಸಿದರು. ಜೆಇ ಕೊಟ್ರೇಶ್, ಎನ್.ಆರ್.ಎಲ್.ಎಂ. ತಾಲೂಕು ಸಂಯೋಜಕಿ ರೇಣುಕಾ ಇತರರಿದ್ದರು.
Published on

ಕನಕಗಿರಿ: ಪ್ರತಿ ತಿಂಗಳು ಮಾಸಿಕ ಸಂತೆ ಆಯೋಜನೆಯಿಂದ ಸ್ವ ಸಹಾಯ ಸಂಘದ ಮಹಿಳೆಯರಿಗೆ ಅನುಕೂಲವಾಗಿದೆ ಎಂದು ತಾಪಂ ಇಒ ಕೆ.ರಾಜಶೇಖರ್ ಹೇಳಿದರು.

ಪಟ್ಟಣದ ವಾರದ ಸಂತೆಯ ಮೈದಾನದಲ್ಲಿ ತಾಪಂ ಎನ್.ಆರ್.ಎಲ್.ಎಂ ಸಂಜೀವಿನಿ ಯೋಜನೆಯಡಿ ಸೋಮವಾರ ಹಮ್ಮಿಕೊಂಡಿದ್ದ ಸಂಜೀವಿನಿ ಮಾಸಿಕ ಸಂತೆ ಹಾಗೂ ದೀಪ ಸಂಜೀವಿನಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಾಸಿಕ ಸಂತೆ ಆಯೋಜನೆಯಿಂದ ಮಹಿಳೆಯರು ತಯಾರಿಸಿದ ಉತ್ಪನ್ನಗಳಿಗೆ ವೇದಿಕೆ ಕಲ್ಪಿಸುವ ಜೊತೆಗೆ ಆದಾಯ ಹೆಚ್ಚಿಸಿದಂತಾಗಿದೆ ಎಂದರು.

ಮಹಿಳಾ ಸ್ವ ಸಹಾಯ ಸಂಘಗಳ ಸದಸ್ಯರು ಆರ್ಥಿಕ ಹಾಗೂ ಸಾಮಾಜಿಕವಾಗಿ ಸಬಲರಾಗಲು ಸಂಜೀವಿನಿ ಕಾರ್ಯಕ್ರಮಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಬೆಳಕಿನ ಹಬ್ಬವೇ ದೀಪಾವಳಿ, ಸ್ವ ಸಹಾಯ ಸಂಘಗಳ ಮಹಿಳೆಯರು ತಮ್ಮ ಕೈ ಚಳಕ, ಪರಿಶ್ರಮ ಹಾಗೂ ಸೃಜನಶೀಲತೆಯಿಂದ ವಿವಿಧ ಆಕರ್ಷಕ ದೀಪಗಳನ್ನು ತಯಾರಿಸಿದ್ದಾರೆ. ಅವರಿಗೆ ಮಾರುಕಟ್ಟೆ ಒದಗಿಸುವುದು, ಸ್ವದೇಶಿ ಉತ್ಪನ್ನಗಳನ್ನು ಬೆಂಬಲಿಸುವ ಮೂಲಕ ಅವರ ಸ್ವಾವಲಂಬಿ ನಡೆಗಳನ್ನು ಪ್ರೆರೇಪಿಸುವುದೇ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.

ಮಾಸಿಕ ಸಂತೆಯಲ್ಲಿ ಮಹಿಳೆಯರಿಂದ ತಯಾರಿಸಲ್ಪಟ್ಟ ವಸ್ತುಗಳ ಜತೆಗೆ ವಿವಿಧ ಉತ್ಪನ್ನಗಳಾದ ಸಿಹಿ ತಿನಿಸುಗಳು, ಬಟ್ಟೆ, ಬಳೆ ತೊಗರಿ ಬೆಳೆ, ಖಾರದ ಪುಡಿ, ಕಸೂತಿ ಸೇರಿ ಕರಕುಶಲ ವಸ್ತುಗಳು ಹಾಗೂ ದೀಪಾವಳಿ ಹಬ್ಬಕ್ಕಾಗಿ ಆಕರ್ಷಕ ದೀಪಗಳು ಲಭ್ಯವಿದ್ದವು. ಎನ್.ಆರ್.ಎಲ್.ಎಂ. ತಾಲೂಕು ಸಂಯೋಜಕಿ ರೇಣುಕಾ, ಪಿಡಿಒ ಈರಪ್ಪ, ಜೆಇ ಕೊಟ್ರೇಶ್, ಸಿಬ್ಬಂದಿ ಹುಲಿಗೇಶ್ ಸೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net