ಮೊಬೈಲ್ ಹ್ಯಾಕ್ ಮಾಡಿ ಅಶ್ಲೀಲ ಚಿತ್ರ ರವಾನೆ

mobile hack
ಮೊಬೈಲ್ ಹ್ಯಾಕ್ ಆದ ಹಿನ್ನೆಲೆಯಲ್ಲಿ ಕನಕಗಿರಿ ಠಾಣೆಗೆ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಕಾಶ ಹಾದಿಮನಿ ಹಾಗೂ ಮುಖ್ಯ ಶಿಕ್ಷಕ ಸಂಗಮೇಶ ಹಿರೇಮಠ ಆಗಮಿಸಿ ಪಿಐ ಎಂ.ಡಿ. ಫೈಜುಲ್ಲಾರನ್ನು ಭೇಟಿ ಮಾಡಿದರು. ಮಂಡಲ ಅಧ್ಯಕ್ಷ ಸಣ್ಣ ಕನಕಪ್ಪ, ಮುಖ್ಯ ಪೇದೆಗಳಾದ ಬೈಲಪ್ಪ, ಕಿಶೋರ ಇದ್ದರು.
Published on

ಕನಕಗಿರಿ: ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಹಾಗೂ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕನ ಮೊಬೈಲ್ ಹ್ಯಾಕ್ ಮಾಡಿದ ದುರುಳರು ಅಶ್ಲೀಲ ಚಿತ್ರಗಳನ್ನು ಹರಿಬಿಟ್ಟು ಆತಂಕ ಸೃಷ್ಠಿಸಿದ್ದು, ಇಬ್ಬರೂ ಗುರುವಾರ ಸಂಜೆ ಪೊಲೀಸರ ಮೊರೆ ಹೋಗಿದ್ದಾರೆ.

ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಕಾಶ ಹಾದಿಮನಿ ಹಾಗೂ ಎಂಎಚ್‌ಪಿಎಸ್ ಮುಖ್ಯ ಶಿಕ್ಷಕ ಸಂಗಮೇಶ ಹಿರೇಮಠ ಅವರ ಮೊಬೈಲ್‌ಗಳು ಗುರುವಾರ ಸಂಜೆ ಹ್ಯಾಕ್ ಆಗಿವೆ. ಅವರ ಮೊಬೈಲ್‌ನಿಂದ ಹಲವು ಗ್ರೂಪ್‌ಗಳಿಗೆ ಅಶ್ಲೀಲ ಚಿತ್ರಗಳು ರವಾನೆಯಾಗಿವೆ. ಇದರಿಂದ ಕೆಲಕಾಲ ಆತಂಕ ಸೃಷ್ಠಿಯಾಗಿತ್ತು.

ಮೊದಲಿಗೆ ಮಂಡಲ ಅಧ್ಯಕ್ಷ ಸಣ್ಣ ಕನಕಪ್ಪ ಇತರರೊಂದಿಗೆ ಠಾಣೆಗೆ ಆಗಮಿಸಿದ ಪ್ರಕಾಶ ಹಾದಿಮನಿ ಪೊಲೀಸ್ ಗ್ರೂಪ್, ಬಿಜೆಪಿ, ಸಮಾಜದ ಗ್ರೂಪ್ ಸೇರಿ ಇತರ ಗ್ರೂಪ್‌ಗಳಿಗೆ ಹೋಗಿದ್ದ ಅಶ್ಲೀಲ ಚಿತ್ರಗಳನ್ನು ಡಿಲಿಟ್ ಮಾಡಿಸಿದರು.

ಮುಖ್ಯಶಿಕ್ಷಕ ಸಂಗಮೇಶ ಹಿರೇಮಠ ಎಸ್‌ಡಿಎಂಸಿ ಸದಸ್ಯರೊಂದಿಗೆ ಠಾಣೆಗೆ ಆಗಮಿಸಿ, ತಮ್ಮ ಮೊಬೈಲ್ ಹ್ಯಾಕ್ ಆಗಿ ಅಶ್ಲೀಲ ಫೋಟೊಗಳು ರವಾನೆಯಾಗಿವೆ. ಇದರಿಂದ ನನಗೆ ಕರೆ ಮಾಡಿ ಬೈಯುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು. ಹ್ಯಾಕ್ ಮಾಡಿರುವ ಸೈಬರ್ ವಂಚಕರನ್ನು ಪತ್ತೆ ಹಚ್ಚುವ ಭರವಸೆ ಪೊಲೀಸರು ನೀಡಿದ್ದಾರೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net