ಎಲ್ಕೆಜಿಗೆ 30 ಮಕ್ಕಳ ಆಯ್ಕೆ

Untitled design(11)
Published on

ಕನಕಗಿರಿ: ಪಟ್ಟಣದ ಸರ್ಕಾರಿ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಆಂಗ್ಲ ಮಾಧ್ಯಮದ ಎಲ್‌ಕೆಜಿ ವಿಭಾಗಕ್ಕೆ ಆಯ್ಕೆ ಮಾಡಲು ಲಾಟರಿ ಪ್ರಕ್ರಿಯೆಗೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಂಜುನಾಥ ಕಲಕೇರಿಮಠ ಶುಕ್ರವಾರ ಚಾಲನೆ ನೀಡಿದರು.

ಮುಖ್ಯಶಿಕ್ಷಕ ಸಂಗಮೇಶ ಹಿರೇಮಠ ಮಾತನಾಡಿ, ಶಾಲೆ ಆಂಗ್ಲ ಮಾಧ್ಯಮದ ಎಲ್‌ಕೆಜಿ ವಿಭಾಗಕ್ಕೆ 59 ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಪೈಕಿ 30 ಮಕ್ಕಳನ್ನು ಲಾಟರಿ ಮೂಲಕ ಆಯ್ಕೆ ಮಾಡಿಕೊಳ್ಳಲಾಗಿದೆ ತಿಳಿಸಿದರು. ಶಿಕ್ಷಕರಾದ ಮಲ್ಲಿಕಾರ್ಜುನ ಕುಷ್ಟಗಿ, ಸುನೀತಾ ಪತ್ತಾರ, ಹುಲಿಗೆಮ್ಮ ನಾಯಕ, ಧನಂಜಯ ಹೊಸಪೇಟೆ, ರಜೀಯಾಬೇಗಂ ಸೇರಿದಂತೆ ಪಾಲಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net