ಮಂತ್ರಾಲಯ ಪಾದಯಾತ್ರಿಗಳ ಸಂಖ್ಯೆ ಹೆಚ್ಚಳ

PADAYATRE
ಕನಕಗಿರಿಯ ಕನಕಾಚಲ, ಪ್ರತಾಪರಾಯ ಭಜನಾ ಮಂಡಳಿ ಹಾಗೂ ಶ್ರೀಗುರು ರಾಘವೇಂದ್ರಸ್ವಾಮಿ ಭಜನಾ ಸಂಘಗಳ ಸಹಯೋಗದಲ್ಲಿ ಕೈಗೊಂಡ ಪಾದಯಾತ್ರೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು. ಪ್ರಮುಖರಾದ ನಾಗೇಶ ವಾಲೇಕಾರ, ವಿಜಯಕುಮಾರ ಹೊಸಳ್ಳಿ, ರಾಘವೇಂದ್ರ ಚಿತ್ರಗಾರ, ವಿನೋದ ಪತ್ತಾರ ಇತರರಿದ್ದರು.
Published on

ಕನಕಗಿರಿ: ಮಂತ್ರಾಲಯಕ್ಕೆ ಪಾದಯಾತ್ರೆ ಮೂಲಕ ತೆರಳುವ ಭಕ್ತರ ಸಂಖ್ಯೆ ಪ್ರಸಕ್ತ ವರ್ಷ ಹೆಚ್ಚಾಗಿದೆ ಎಂದು ಭಜನಾ ಕಲಾವಿದರ ಸಂಘದ ಪದಾಧಿಕಾರಿ ಸುರೇಶರೆಡ್ಡಿ ಮಹಲಿನಮನಿ ಹೇಳಿದರು.

ಇಲ್ಲಿನ ಕನಕಾಚಲ, ಪ್ರತಾಪರಾಯ ಭಜನಾ ಮಂಡಳಿ ಹಾಗೂ ಶ್ರೀಗುರು ರಾಘವೇಂದ್ರಸ್ವಾಮಿ ಭಜನಾ ಸಂಘಗಳ ಸಹಯೋಗದಲ್ಲಿ ಕೈಗೊಂಡ ಮಂತ್ರಾಲಯ ಪಾದಯಾತ್ರೆಯಲ್ಲಿ ಭಾಗಿಯಾಗಿ ಬುಧವಾರ ಮಾತನಾಡಿದರು.

23 ವರ್ಷಗಳ ಹಿಂದೆ ಕೆಲವೇ ಭಕ್ತರು ಮಂತ್ರಾಲಯಕ್ಕೆ ಪಾದಯಾತ್ರೆ ಕೈಗೊಂಡಿದ್ದು, ಇದೀಗ ಪಟ್ಟಣ ಸೇರಿ ಸುತ್ತಮುತ್ತಲಿನ ಗ್ರಾಮಗಳಿಂದ 60ಕ್ಕೂ ಹೆಚ್ಚು ಭಕ್ತರು ಪಾದಯಾತ್ರೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಗುರುರಾಯರ ಸನ್ನಿಧಾನಕ್ಕೆ ತೆರಳುವವರೆಗೂ ರಾಘವೇಂದ್ರರ ಕುರಿತು ವಿವಿಧ ದಾಸರು ರಚಿಸಿದ ಕಿರ್ತನೆ, ಹಾಡುಗಳನ್ನು ಪಾರಾಯಣ ಮಾಡಲಾಗುವುದು. ಪಾದಯಾತ್ರೆಯ ಜತೆಗೆ ಅಯೋಧ್ಯೆಯಿಂದ ಬಂದ ಮಂತ್ರಾಕ್ಷತೆ, ಕರಪತ್ರ ಹಾಗೂ ಶ್ರೀರಾಮ ಮಂದಿರದ ಭಾವಚಿತ್ರವನ್ನು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.

ಪಟ್ಟಣದ ತೇರಿನ ಹನುಮಂತರಾಯ ದೇವಸ್ಥಾನದಿಂದ ರಾಜಬೀದಿಯ ಮೂಲಕ ಸಾಗಿದ ಮೆರವಣಿಗೆ ಶ್ರೀ ಕನಕಾಚಲ, ಶ್ರೀ ಪ್ರತಾಪರಾಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ವಾಲ್ಮೀಕಿ ವೃತ್ತದ ಮಾರ್ಗವಾಗಿ ಸಿಂಧನೂರು ತಾಲೂಕಿನ ಜಾಲಿಹಾಳ ಕಡೆಗೆ ಭಕ್ತರು ಪಯಣ ಬೆಳೆಸಿದರು.

ಪರಂಧಾಮರೆಡ್ಡಿ ಬೀರಳ್ಳಿ, ಶ್ರೀನಿವಾಸರೆಡ್ಡಿ ಓಣಿಮನಿ, ಅಶೋಕ ನಾಯಕ, ಕೃಷ್ಣ ನಾಯಕ, ನಾಗರೆಡ್ಡಿ ಮಹಲಿನಮನಿ, ನಾಗೇಶ ವಾಲೇಕಾರ, ವಿಜಯಕುಮಾರ ಹೊಸಳ್ಳಿ, ರಾಘವೇಂದ್ರ ಚಿತ್ರಗಾರ, ವಿನೋದ ಪತ್ತಾರ, ಭೀಮಣ್ಣ ಮರಾಠಿ, ವೀರೇಶ ವಸ್ತ್ರದ, ಅಂಬಣ್ಣ ಮಹಿಪತಿ, ಜಯಪ್ರಕಾಶರೆಡ್ಡಿ, ಶರಣಪ್ಪ ಕೊರೆಡ್ಡಿ, ರಾಮಣ್ಣ ಚಿದಾನಂದಪ್ಪ, ರತ್ನಮ್ಮ ಮಾದಿನಾಳ, ಸಿಂಧು ಬಲ್ಲಾಳ, ರಾಮಣ್ಣ ಆಗೋಲಿ, ಪ್ರಜ್ವಲ್, ಹರೀಶ ಕೋರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net