ಗುರು ರಾಯರ ಮಹಿಮೆ ಅಪಾರ

Mantralaya Padayatra,
ಮಕರ ಸಂಕ್ರಾಂತಿ ನಿಮಿತ್ತ ಕನಕಗಿರಿಯಿಂದ ಮಂತ್ರಾಲಯಕ್ಕೆ ಭಕ್ತರು ಗುರುವಾರ ಪಾದಯಾತ್ರೆ ಬೆಳೆಸಿದರು. ಪ್ರಮುಖರಾದ ಯಂಕಾರೆಡ್ಡಿ ಓಣಿಮನಿ, ಭೀಮೇಶ ಮರಾಠಿ, ವೀರೇಶ ಜೆ.ಪಿ. ಇತರರಿದ್ದರು.
Published on

ಕನಕಗಿರಿ: ಮಕರ ಸಂಕ್ರಾಂತಿ ನಿಮಿತ್ತ ಇಲ್ಲಿನ ಪ್ರತಾಪರಾಯ, ಕನಕಾಚಲಪತಿ ಹಾಗೂ ಶ್ರೀರಾಘವೇಂದ್ರಸ್ವಾಮಿ ಭಜನಾ ಸಂಘಗಳ ಸಹಯೋಗದೊಂದಿಗೆ ಭಕ್ತರು ಗುರುವಾರದಿಂದ 24ನೇ ವರ್ಷದ ಮಂತ್ರಾಲಯ ಪಾದಯಾತ್ರೆ ಕೈಗೊಂಡರು.

ಶ್ರೀ ರಾಘವೇಂದ್ರಸ್ವಾಮಿ ಭಜನಾ ಸಂಘದ ಗೌರವಾಧ್ಯಕ್ಷ ಸುರೇಶರೆಡ್ಡಿ ಮಹಲಿನಮನಿ ಮಾತನಾಡಿ, ಕಳೆದ 24 ವರ್ಷಗಳಿಂದ ಪಟ್ಟಣದಿಂದ ಗುರು ರಾಯರ ಸನ್ನಿಧಿಗೆ ಪಾದಯಾತ್ರೆ ಕೈಗೊಳ್ಳುತ್ತಿದ್ದೇವೆ. ವರ್ಷದಿಂದ ವರ್ಷಕ್ಕೆ ಮಂತ್ರಾಲಯಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಕೇವಲ ಹಿಂದುಗಳು ಅಲ್ಲದೇ, ಮುಸ್ಲಿಂ ಭಕ್ತರೂ ಪಾದಯಾತ್ರೆಗೆ ಬರುತ್ತಿರುವುದು ಗುರು ರಾಯರ ಮಹಿಮೆ ತಿಳಿಸುತ್ತದೆ ಎಂದರು.

ಇದಕ್ಕೂ ಮೊದಲು ಎದುರು ಹನುಮಪ್ಪ ದೇವಸ್ಥಾನದಿಂದ ಆರಂಭಗೊಂಡ ಪಾದಯಾತ್ರೆಯ ಮೆರವಣಿಗೆ ರಾಜಬೀದಿ ಮೂಲಕ ಶ್ರೀ ಕನಕಾಚಲಪತಿ ದೇವಸ್ಥಾನ, ಬಸ್ ನಿಲ್ದಾಣ, ವಾಲ್ಮೀಕಿ ವೃತ್ತದ ಮಾರ್ಗವಾಗಿ ಮಂತ್ರಾಲಯಕ್ಕೆ ತೆರಳಿತು.

ಪ್ರಮುಖರಾದ ಭೀಮರೆಡ್ಡಿ ಓಣಿಮನಿ, ಸುರೇಶಪ್ಪ ಬೊಂದಾಡೆ, ಶ್ರೀನಿವಾಸರೆಡ್ಡಿ ಓಣಿಮನಿ, ವಿನಯ ಪತ್ತಾರ, ರಾಮಣ್ಣ ಪೂಜಾರ, ಶಿವಪ್ಪ ಅಂಕಸದೊಡ್ಡಿ, ವೀರೇಶ ವಸ್ತ್ರದ, ನಾಗರೆಡ್ಡಿ ಮಾದಿನಾಳ, ಶರಣಪ್ಪ ಕೊರೆಡ್ಡಿ, ಶರಣಪ್ಪ ಬಾವಿಕಟ್ಟಿ, ರವಿ ಪಾಟೀಲ್ ಇತರರಿದ್ದರು.

ಪಾದಯಾತ್ರೆಯಲ್ಲಿ ಕನ್ನಡದ ಜಾಗೃತಿ: ಕರ್ನಾಟಕ ಸುವರ್ಣ ಸಂಭ್ರಮ ಅಂಗವಾಗಿ ಪಾದಯಾತ್ರೆ ಸಮಿತಿಯು ಅಡುಗೆ, ಯಾತ್ರಿಗಳ ಬ್ಯಾಗ್‌ಗಳನ್ನು ಹೊತ್ತು ಸಾಗುವ ವಾಹನಗಳಿಗೆ ಕನ್ನಡಾಂಬೆ ಹಾಗೂ ಸರ್ಕಾರ ಬಿಡುಗಡೆಗೊಳಿಸಿದ 50ನೇ ಸುವರ್ಣ ಸಂಭ್ರಮದ ಲಾಂಚನವುಳ್ಳ ಭಾವಚಿತ್ರಗಳನ್ನು ಕಟ್ಟಲಾಗಿತ್ತು. ಗಡಿ ಭಾಗದ ಕನ್ನಡ ಮಾತನಾಡುವ ಗ್ರಾಮಗಳಲ್ಲಿ ಕನ್ನಡ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತದೆ ಎಂದು ಪಾದಯಾತ್ರಿಯೊಬ್ಬರು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net