

ಕನಕಗಿರಿ: ಪಟ್ಟಣದ ರಾಜಬೀದಿಯಲ್ಲಿನ ಐತಿಹಾಸಿಕ ಮಹಿಷಾಸುರ ಮರ್ಧಿನಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ಕೊನೇ ಮಂಗಳವಾರದ ನಿಮಿತ್ತ ವಿಶೇಷ ಪೂಜೆ ನಡೆಯಿತು.
ಶ್ರಾವಣ ಮಂಗಳವಾರ ನಿಮಿತ್ತ ದೇವಿಗೆ ನಾನಾ ಆಭರಣ, ಹೂಗಳಿಂದ ಸಿಂಗರಿಸಲಾಗಿತ್ತು.
ಇದನ್ನೂ ಓದಿ: ಮಹಿಷಾಸುರ ಮರ್ದಿನಿ ವಿಗ್ರಹಮೂರ್ತಿ ಮೆರವಣಿಗೆ
ವಿಶೇಷ ಅಭಿಷೇಕ, ಅರ್ಚನೆ ನಡೆದವು. ಭಕ್ತರಿಗೆ ಅನ್ನ ಪ್ರಸಾದ ಏರ್ಪಡಿಸಲಾಗಿತ್ತು. ಪ್ರಮುಖರಾದ ಚಂದ್ರಶೇಖರ ಸಜ್ಜನ್, ಪರಶುರಾಮ ಟೈಲರ್, ಹನುಮೇಶ ಶೆಟ್ರ, ಅಶೋಕ, ಪ್ರವೀಣ ಸಜ್ಜನ್, ನಾಗರಾಜ ಇತರರಿದ್ದರು.