

ಕನಕಗಿರಿ: ಮಹಾಭಾರತದ ತಾತ್ಪರ್ಯ ಹಾಗೂ ದಶ ಉಪನಿಷತ್ತುಗಳಿಗೆ ಭಾಷ್ಯ ಬರೆದಿರುವ ಮಧ್ವಾಚಾರ್ಯರು ಸನಾತನ ಧರ್ಮಕ್ಕೆ ನೀಡಿದ ಕೊಡುಗೆ ಅಪಾರ ಎಂದು ಸಾಹಿತಿ ಪವನಕುಮಾರ ಗುಂಡೂರು ಹೇಳಿದರು.
ತಾಲೂಕಿನ ನವಲಿ ಗ್ರಾಮದ ಭೋಗಾಪುರೇಶ ದೇವಸ್ಥಾನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಧ್ವನವಮಿ ಉತ್ಸವದಲ್ಲಿ ಮಾತನಾಡಿದರು. ಮಧ್ವಚಾರ್ಯರು ಋಗ್ವೇದದ 40 ಸೂಕ್ತಿಗಳಿಗೆ ಟೀಕೆಯನ್ನು ರಚಿಸಿದ್ದಾರೆ. ಸನಾತನ ಧರ್ಮದ ಉಳಿವಿಗೆ ಮಧ್ವರ ಕೊಡುಗೆ ಅವಿಸ್ಮರಣೀಯ ಎಂದರು.
ಇದಕ್ಕೂ ಮುನ್ನ ದೇವಸ್ಥಾನ ಪ್ರಾಂಗಣದಲ್ಲಿ ಮಧ್ವಚಾರ್ಯರ ಭಾವಚಿತ್ರ ಹಾಗೂ ಅವರು ರಚಿಸಿದ ಗ್ರಂಥಗಳನ್ನು ಮೆರವಣಿಗೆ ಮಾಡಲಾಯಿತು. ಕನಕಗಿರಿಯ ಶ್ರೀ ರಾಘವೇಂದ್ರಸ್ವಾಮಿ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.\
ಬೆಳಗ್ಗೆ ಪಂಚಾಮೃತ, ಮಧು ಅಭಿಷೇಕ, ವಾಯುಸ್ತುತಿ ಪುನಶ್ಚರಣ, ವಿಶೇಷ ಪೂಜೆ, ಪುಷ್ಪಾಲಂಕಾರ, ನೈವೈದ್ಯ ಇತರ ಕಾರ್ಯಕ್ರಮಗಳು ಜರುಗಿದವು. ಪ್ರಮುಖರಾದ ಆನಂದತೀರ್ಥ ನವಲಿ, ಮುಕ್ಕುಂದ ನವಲಿ, ಗೋವಿಂದಾಚಾರ್ ನವಲಿ, ಮುರುಳೀಧರ ನವಲಿ, ರಾಘವೇಂದ್ರ ನವಲಿ, ಕಲಾವಿದರಾದ ಸುರೇಶರೆಡ್ಡಿ ಮಹಲಿನಮನಿ, ಭೀಮರೆಡ್ಡಿ ಓಣಿಮನಿ, ಭೀಮರಾವ್ ಮರಾಠಿ, ಕಲೀಲಸಾಬ, ಪಂಪಾಪತಿ ತುಪ್ಪದ, ಹನುಮಮತರೆಡ್ಡಿ, ಅಂಬೋಜಿರಾವ್ ಬೊಂದಾಡೆ, ವೀರೇಶ ವಸ್ತ್ರದ್, ಕಮಲಾಬಾಯಿ, ಸುಜಾತಾ ನವಲಿ, ಮೇಘನಾ ನವಲಿ, ಲಕ್ಷ್ಮೀಬಾಯಿ ಪೂಜಾರ ಇತರರಿದ್ದರು.