ಕನಕಗಿರಿಯಲ್ಲಿ ಚಿರತೆ ಪ್ರತ್ಯಕ್ಷ

Kanakagiri leopad bone
ಘನತ್ಯಾಜ್ಯ ವಿಲೇವಾರಿ ಘಟಕದ ಹಿಂಭಾಗದಲ್ಲಿ ಚಿರತೆ ಸೆರೆಗಾಗಿ ಇರಿಸಿರುವ ಬೋನು.
Published on

ಕನಕಗಿರಿ: ಪಪಂ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಇತ್ತೀಚೆಗೆ ಚಿರತೆ ಕಾಣಿಸಿಕೊಂಡಿದ್ದು, ಕಾರ್ಮಿಕರು ಹಾಗೂ ಸಾರ್ವಜನಿಕರು ಭಯಭೀತರಾಗಿದ್ದರೆ.

ಘಟಕದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿರುವಾಗ ಒಳಗೆ ನುಗ್ಗಿರುವ ಚಿರತೆ ಕಂಡು ಕೈಗೆ ಸಿಕ್ಕ ವಾಹನಗಳನ್ನೇರಿ ಮನೆ ಕಡೆಗೆ ದಾರಿ ಹಿಡಿದಿದ್ದಾರೆ. ಈ ಭಾಗದಲ್ಲಿದ್ದ ಒಂದೂವರೆ ವರ್ಷದಿಂದ ಚಿರತೆ ಕಾಣಿಸಿಕೊಂಡಿಲ್ಲದ್ದರಿಂದ ಜಾನುವಾರುಗಳನ್ನು ಕೊಟ್ಟಿ, ಹಟ್ಟಿಯಲ್ಲಿ ಕಟ್ಟಿ ಮಾಲೀಕರು ನೆಮ್ಮದಿಯಾಗಿದ್ದರು. ಗುಡ್ಡಗಾಡು ಪ್ರದೇಶಗಳಿಗೆ ಕುರಿಗಳನ್ನು ಮೇಯಲು ಬಿಡುತ್ತಿದ್ದರು. ಇದೀಗ ಚಿರತೆ ಭೀತಿ ಶುರುವಾಗಿದ್ದು, ಸೆರೆಗಾಗಿ ಅರಣ್ಯ ಇಲಾಖೆ ಬೋನು ಅಳವಡಿಸಿದ್ದು, ಸೆರೆಯಾಗದಿರುವುದು ಚಿಂತೆಯಾಗಿದೆ. ಪ್ರಾಣ ಭಯದಲ್ಲೇ ಕಾರ್ಮಿಕರು ಘಟಕದಲ್ಲಿ ಕೆಲಸ ಮಾಡುತ್ತಿದ್ದು, ರಕ್ಷಣೆಗೆ ಕ್ರಮವಹಿಸುವಂತೆ ಪಪಂನಿಂದ ಅರಣ್ಯ ಇಲಾಖೆಗೆ ಪತ್ರ ಬರೆಯಲಾಗಿದೆ.

ಬಹು ದಿನಗಳ ನಂತರ ಈ ಭಾಗದಲ್ಲಿ ಚಿರತೆ ಕಾಣಿಸಿಕೊಂಡಿದೆ. ಇದು ಸಂತಾನೋತ್ಪತ್ತಿಯ ಕಾಲವಾದ್ದರಿಂದ ಕಾಣಿಸಿರಬಹುದು. ಪದೇ ಪದೇ ಒಂದೇ ಸ್ಥಳದಲ್ಲಿ ಕಾಣಿಸಿಕೊಂಡರೆ ಸೆರೆಗೆ ಮುಂದಿನ ಕ್ರಮ ಕೈಗೊಳ್ಳ ಬಹುದು. ಭಯಪಡುವ ಅಗತ್ಯವಿಲ್ಲ. | ಸುಭಾಷಚಂದ್ರ ಆರ್‌ಎಫ್‌ಒ, ಗಂಗಾವತಿ ಘನತ್ಯಾಜ್ಯ ವಿಲೇವಾರಿ ಘಟಕ ದಲ್ಲಿ ಚಿರತೆ ಕಾಣಿಸಿಕೊಂಡಿದ್ದಾ ರಿಂದ ಕೆಲ ದಿನಗಳವರೆಗೆ ಕೆಲಸ ಮಾಡದಂತೆ ಕಾರ್ಮಿಕರಿಗೆ ಸೂಚಿಸಿದ್ದು, ಅರಣ್ಯ ಇಲಾಖೆಗೂ ಸುರಕ್ಷತಾ ಕ್ರಮಕ್ಕಾಗಿ ಪತ್ರ ಬರೆಯಲಾಗಿದೆ. | ದತ್ತಾತ್ರೇಯ ಹೆಗಡೆ ಕನಕಗಿರಿ ಪಪಂ ಮುಖ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net