

ಕನಕಗಿರಿ: ಮಕ್ಕಳ ಸೃಜನಶೀಲ ಕಲಿಕೆ ಹಾಗೂ ಕಲೆಯ ಅನಾವರಣಕ್ಕೆ ಕಲಿಕಾ ಹಬ್ಬ ವೇದಿಕೆಯಾಗಿ ಬದುಕಿನ ಜ್ಞಾನ ಹೆಚ್ಚಿಸುತ್ತದೆ ಎಂದು ಹಿರೇಖೇಡ ಪ್ರೌಢಶಾಲೆ ಮುಖ್ಯಶಿಕ್ಷಕ ಚಂದುಸಾಬ್ ಹೇಳಿದರು.
ಹಿರೇಖೇಡ ಪ್ರೌಢಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಕಲಿಕಾ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಕಲಿಕಾ ಹಬ್ಬ ಕರಕುಶಲ ಕಲೆ, ವಿನೋದ ಕಲಿಕೆಗೆ ಹಾಗೂ ಮೋಜಿನ ಆಟಗಳ ಮೂಲಕ ಮಕ್ಕಳಲ್ಲಿರುವ ಕ್ರಿಯಾಶೀಲ ಜ್ಞಾನ ಹೊರಹಾಕಲು ಸಹಕಾರಿಯಾಗಿದೆ. ಹಬ್ಬದ ಸದುಪಯೋಗ ಪಡೆದು ತರಗತಿ ಕೋಣೆಯಲ್ಲಿ ಬಳಸಿ ಜೀವನಕ್ಕೆ ಅನ್ವಯಿಸಿಕೊಳ್ಳಬೇಕು ಎಂದರು.
ದೇವಸ್ಥಾನದಿಂದ ವೇದಿಕೆಗೆ ನಡೆದ ಮೆರವಣಿಗೆಯಲ್ಲಿ ಕಂಸಾಳೆ, ಅಲಾಯಿ ಕುಣಿತ, ಗೆಜ್ಜೆಕುಣಿತ, ಹಗಲು ವೇಷಗಾರರು, ಭಜನೆ, ಕುಂಭ, ಕೋಲಾಟ ಗಮನ ಸೆಳೆಯಿತು. ಗ್ರಾಪಂ ಅಧ್ಯಕ್ಷ ಭೀಮನಗೌಡ ಹೊಸಕೆರಾ, ಪ್ರೌಢಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಅನಿಲ್‌ಕುಮಾರ, ಗೌರವ ಅಧ್ಯಕ್ಷ ಪ್ರಭು ವಸ್ತ್ರದ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಶೇಖರ ನಾಯ್ಕ, ನಿರ್ದೇಶಕ ತಿಪ್ಪೇಶ, ಎಸ್ಡಿಎಂಸಿ ಅಧ್ಯಕ್ಷ ರವಿಕುಮಾರ, ಪ್ರಮುಖರಾದ ಸಣ್ಣೆಪ್ಪ, ಸಣ್ಣ ಸಿದ್ದೇಶ್ವರ ಮುದುಕೇಶ, ದೊಡ್ಡಯ್ಯ, ಸಿಆರ್‌ಪಿ ಸಂಗಮೇಶ ಹಿರೇಮಠ ಇತರರಿದ್ದರು.