ವಲಸೆ ಹೋಗದೆ ಇದ್ದೂರಲ್ಲೇ ಕೆಲಸ ಮಾಡಿ

Kanakagiri narega work visit to eo
ಕನಕಗಿರಿ ತಾಲೂಕಿನ ಹಿರೇಖೇಡ ಗ್ರಾಮದಲ್ಲಿ ಗ್ರಾಪಂ ವತಿಯಿಂದ ಕೈಗೊಳ್ಳಲಾದ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಹಾಜರಿದ್ದ ಕೂಲಿ ಕಾರ್ಮಿಕರು.
Published on

ಕನಕಗಿರಿ: ಕೂಲಿಕಾರರು ತಾವಿರುವ ಸ್ಥಳದಲ್ಲಿ ಕೆಲಸವಿಲ್ಲವೆಂದು ಗುಳೆ ಹೋಗುವುದಕ್ಕೆ ಯೋಚಿಸದೇ ನರೇಗಾ ಯೋಜನೆಯಡಿ ನೀವಿದ್ದ ಊರಲ್ಲಿಯೇ ಕೆಲಸ ಮಾಡಿ ಕೂಲಿ ಪಡೆಯಿರಿ ಎಂದು ತಾಪಂ ಸಹಾಯಕ ನಿರ್ದೇಶಕಿ ಶರಪೂನ್ನಿಸಾ ಬೇಗಂ ಹೇಳಿದರು.

ತಾಲೂಕಿನ ಹಿರೇಖೇಡದಲ್ಲಿ ಗ್ರಾಪಂ ವತಿಯಿಂದ ಕೈಗೊಳ್ಳಲಾಗಿರುವ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದರು. ನರೇಗಾ ಕೂಲಿಕಾರರಿಗೆ ಬೇಸಿಗೆ ಇರುವ ಕಾರಣ ಸತತ ಮೂರು ತಿಂಗಳ ಕಾಲ ಗ್ರಾಪಂನಿಂದ ಕೆಲಸ ನೀಡಲಾಗುತ್ತದೆ. ಕೂಲಿಕಾರರು ಎಲ್ಲೂ ವಲಸೆ ಹೋಗದೆ ಇದ್ದೂರಲ್ಲೇ ಕೆಲಸ ಮಾಡುವ ಮೂಲಕ ನರೇಗಾ ಯೋಜನೆಯ ಸದುಪಯೋಗ ಪಡೆದುಕೊಳ್ಳಿ. ಪ್ರತಿನಿತ್ಯ ತಮಗೆ ನೀಡಿರುವ ಅಳತೆಗನುಸಾರವಾಗಿ ಕೆಲಸ ಮಾಡಿದರೆ ಪೂರ್ತಿ ಕೂಲಿ ಹಣ ಸಿಗಲಿದೆ ಎಂದರು.

ತಾಲೂಕು ಐಇಸಿ ಸಂಯೋಜಕ ಶಿವಕುಮಾರ್ ಕೆ. ಮಾತನಾಡಿ, ಏ.1 ರಿಂದ ನರೇಗಾ ಕೂಲಿ ಮೊತ್ತ 349 ರಿಂದ 370 ರೂ.ಗೆ ಹೆಚ್ಚಳವಾಗಿದ್ದು, ಕೂಲಿಕಾರರು ಇದರ ಸದುಪಯೋಗ ಪಡೆಯಬೇಕು. ಕಾಮಗಾರಿ ಸ್ಥಳದಲ್ಲಿ ಹಾಜರಿರುವ ಕೂಲಿಕಾರರಿಗೆ ಮಾತ್ರ ಎನ್‌ಎಂಎಂಎಸ್‌ಹಾಜರಾತಿ ಹಾಕುವುದು ಸೇರಿ ಕೂಲಿಕಾರರು ಸಮುದಾಯ ಕಾಮಗಾರಿಯಲ್ಲದೇ, ವೈಯಕ್ತಿಕ ಕಾಮಗಾರಿಗಳ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.

ತಾಂತ್ರಿಕ ಸಂಯೋಜಕ ಸೈಯದ್ ತನ್ವೀರ್ ಮಾತನಾಡಿ, ಕೂಲಿಕಾರರು ಕಾಮಗಾರಿ ಸ್ಥಳದಲ್ಲಿ ಕೆಲಸ ಮಾಡುವ ಪ್ರಮಾಣ ಕುರಿತು ಮಾಹಿತಿ ನೀಡಿದರು.

ಗ್ರಾಪಂ ಸದಸ್ಯರಾದ ಬಾರಿಮರದಪ್ಪ, ಭೀಮನಗೌಡ, ಪ್ರಮುಖರಾದ ಹುಲುಗಪ್ಪ ದೊಡ್ಡಮನಿ, ಬಾರಿಮರದಪ್ಪ ನಡುಲಮನಿ, ಶಾಮಣ್ಣ ಸಿರವಾರ, ಶಿವಕುಮಾರ್ ಬಡಿಗೇರ್, ಭೀಮನಗೌಡ ಗುಡದೂರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net